ಬೆಂಗಳೂರು: ಬೀರ್ ಕುಡಿಯುವ ವಿಷಯಕ್ಕೆ ಗಲಾಟೆಯಾಗಿ ಮಾರಣಾಂತಿಕ ಹಲ್ಲೆ ಘಟನೆ ಕೆ ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಪ ಸ್ವಾಮಿ ಮಠದ ಬಳಿ ಕೆಲವು ದಿನಗಳ ಹಿಂದೆ ವರದಿಯಾಗಿತ್ತು.ಆ ದಿನ ಕೆಪಿ ಅಗ್ರಹಾರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಗಾಯಾಳು ಕುಶಾಲ್ ಸ್ನೇಹಿತರು ಕುಡಿದ ನಿಶೆಯಲ್ಲಿ ಗಲಾಟೆ ಶುರುವಾಗಿ ಕಲ್ಲಿನಿಂದ ಮತ್ತು ಬಾಟಲಿನಿಂದಚುಚ್ಚಿ ಗಾಯಗೊಳಿಸಿದ ಕುಶಾಲ್ 23 ವರ್ಷದ ಆಟೋ ಚಾಲಕನನ್ನು ಮೊದಲು ಹತ್ತಿರದ ಮಧು ಹಾಸ್ಪಿಟಲ್, ನಂತರ ವಿಕ್ಟೋರಿಯಾ ಆಸ್ಪತ್ರೆ, ತದನಂತರ ಮೈಸೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಮತ್ತು ಕೊನೆಯದಾಗಿ ಕೆ ಸಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿರುತ್ತಾನೆ.ಕೆ ಪಿ ಅಗ್ರಹಾರ ಪೊಲೀಸರು ಕೊಲೆ ಮೊಕದ್ದಮೆ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಲು ತಂಡ ರಚಿಸಿರುತ್ತಾರೆ.