ನೆಲಮಂಗಲ: ಭಾಷಾ ಪ್ರೌಢಮೆ ಕಾಪಾಡಲುಕನ್ನಡ ಭಾಷೆಯ ಬಳಕೆ ನಿತ್ಯ ನಿರಂತರವಾಗಿರ ಬೇಕೆಂದು ಮಕ್ಕಳ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎನ್ ಜಿ ಗೋಪಾಲ್ ಹೇಳಿದರು.ನಗರದ ಸೊಂಡೇಕೊಪ್ಪ ರಸ್ತೆಯ ಶ್ರೀ ಬಸವೇಶ್ವರ ವೃತ್ತದಲ್ಲಿ ಮಾರ್ನಿಂಗ್ ಕಾಫೀ ಫ್ರೆಂಡ್ಸ್ ಕ್ಲಬ್ ಆಯೋಜಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ದ್ವಜಾರೋಹಣವನ್ನು ಮಹದೇಶ್ವರ ಹೋಟೆಲ್ ರೂವಾರಿ ಹಿರಿಯ ನಾಗರೀಕರಾದ ಮಹದೇವಯ್ಯ ನೆರವೇರಿಸಿದರು. ಕನ್ನಡಾಭಿಮಾನಿ ವರ್ತಕ ಮೋಹನ್ ಕುಮಾರ್ ಮಾತನಾಡಿ ನಮ್ಮ ಭಾಷೆ ನಮ್ಮದೆಂಬ ಅಭಿಮಾನ ಎಲ್ಲರ ಹೃನ್ಮಂನಗಳಲ್ಲಿ ಇದ್ದಾಗ ಸದಸ ನಮ್ಮ ವ್ಯಾಪಾರ ವಹಿವಾಟುಗಳ ನಡುವೆ ಕನ್ನಡ ಸಾರ್ವಭೌಮತ್ವ ಜೀವಂತ ಇರುವುದೆಂದರು.
ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ ನಮ್ಮ ಸುತ್ತಮುತ್ತಲಿನ ಜನರಿಗೆ ಕನ್ನಡದ ಪರ ವಿಶ್ವಾಸ ಮೂಡಿಸಬೇಕು. ಅನ್ಯ ಭಾಷಿಗರೊಂದಿಗೆ ದಿನನಿತ್ಯದ ವಹಿವಾಟನ್ನು ಕನ್ನಡ ಭಾಷೆಯಲ್ಲಿ ಮಾಡಿದಾಗ ಅನ್ಯಭಾಷಿಗರಲ್ಲೂ ಕನ್ನಡತನ ಮೂಡುತ್ತದೆ. ಇದರಿಂದ ನಮ್ಮ ಭಾಷೆ ನಾವು ಉಳಿಸುವುದರ ಜೊತೆಗೆ ಬೆಳೆಸಲು ಸಹಕಾರಿಯಾಗುವುದು ಎಂದು ಹೇಳಿದರು.
ಕ್ಲಬ್ನ ಪದಾಧಿಕಾರಿಯಾದ ಗ್ಯಾಸ್ ವಿತರಕರಾಘವೇಂದ್ರ (ಗ್ಯಾಸ್ ರಾಘು) ಮಾತನಾಡುತ್ತಾಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿ
ದರೂ ಅರ್ಥಗರ್ಬಿತವಾಗಿ ರೂಪಿರುವುದು ಸಂತಸವನ್ನುಂಟು ಮಾಡಿದೆ ಎಂದರು.ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಕನ್ನಡದ ಶಾಲು, ಕನ್ನಡ ಪುಸ್ತಕಗಳನ್ನು ಲಘು ಉಪಹಾರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಂ.ಬಿ.ಮಂಜುನಾಥ್,ನಮ್ಮ ಕನ್ನಡ ಜನಸೈನ್ಯ ರಾಜ್ಯಾಧ್ಯಕ್ಷ ಡಾ.ಬಿ.ನರಸಿಂಹಯ್ಯ. ಕಸಾಪದ ರಂಗ
ನಾಥ್, ಕ್ಲಬ್ನ ಸುರೇಂದ್ರ, ರಾಮಣ್ಣ, ಗುಪ್ತ, ಲೋಕೇಶ್, ಕನಿಪಾ ಧ್ವನಿ ತಾ.ಖಜಾಂಚಿ ಶರಣಬಸಪ್ಪ ಗೌಡರ, ಬಾಜಪ ವಿನೋದ್, ಶಿವಲಿಂಗಯ್ಯ, ಉಡುಪಿ ಗ್ರ್ಯಾಂಡ್ ಹೋಟೆಲ್ ಮಾಲೀಕ ಉಮೇಶ್ ಶೆಟ್ಟಿ, ರೇಖಾ, ಆಶಾ, ಗಂಗರಾಜು, ಗುರುಮೂರ್ತಿ ಸೇರಿದಂತೆ ಹಲವರಿದ್ದರು.