ಬೆಂಗಳೂರು: ಪತ್ರಕರ್ತ ಹೆಚ್.ವಿ.ಪಟ್ಟಸ್ವಾಮಿ ನಿರ್ಮಿಸಿ ನಿರ್ದೇಶಿಸುತ್ತಿರುವ ಮೂರನೇ ಚಿತ್ರ ‘ಧರ್ಮಿಷ್ಟ’ ಚಿತ್ರದ ಚಿತ್ರೀಕರಣಕ್ಕೆ ಮಾ.19 ರಂದು ಶನಿವಾರ ಮುಹೂರ್ತ ನಡೆಯಲಿದೆ.ಶ್ರೀರಂಗಪಟ್ಟಣದ ಶ್ರೀ ಕ್ಷಣಾಂಭಿಕಾ ದೇವಸ್ಥಾನದಲ್ಲಿ ಬೆಳಿಗ್ಗೆ 10.30 ಕ್ಕೆ ಮುಹೂರ್ತ ನಡೆಯಲಿದ್ದು, ಅಜಿತ್ ಕುಮಾರ್( ಜೂನಿಯರ್ ರಾಜ್ ಕುಮಾರ್) ಮತ್ತು ಮೈತ್ರಿ ರವರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.
‘ತಿರುವು’ ‘ತ್ರಿಭುಜ’ಚಿತ್ರಗಳ ನಂತರದ ಮೂರನೇ ಚಿತ್ರ ‘ಧರ್ಮಿಷ್ಠ’ ಕ್ಕೆ ಪತ್ರಕರ್ತ ಹೆಚ್.ವಿ.ಪಟ್ಟಸ್ವಾಮಿ ರವರೇ ಕಥೆ, ಸಾಹಿತ್ಯ ನೀಡಿ ಚಿತ್ರವನ್ನು ನಿರ್ಮಿಸಿ ನಿರ್ದೇಶಸಲಿದ್ದಾರೆ. ಭಾಸ್ಕರ್ ಕೃಷ್ಣ ರವರು ಚಿತ್ರಕಥೆ ಬರೆದು ಸಂಭಾಷಣೆ ಬರೆದಿದ್ದಾರೆ. ಎರಡು ಹಾಡುಗಳಿಗೆ ರವೀಶಂಕರ್ ಸಂಗೀತ ನೀಡಿದ್ದಾರೆ.
ಹೊಸದಾಗಿ ಪರಿಯಿಸುತ್ತಿರುವ ‘ಕವಿತ’ ಈ ಚಿತ್ರದ ನಾಯಕಿ ನಟಿಯಾಗಿ ನಟಿಸುತ್ತಿದ್ದು ಅವರ ಜೋಡಿಯಾಗಿ ಪ್ರೀತಮ್ ನಟಿಸುತ್ತಿದ್ದಾರೆ. ಇನ್ನುಳಿದಂತೆ ಎ.ಜಿ.ರಾಮ್ ಚಂದ್ರರಾವ್,ಡಾ.ಮೀನ್ಕೆರೆ ಆಂಜಿನಪ್ಪ, ಸುಮಂತ್, ಪೂರ್ಣಿಮಾ, ಗೋಲ್ಡನ್ ಸುರೇಶ್, ಮೈಸೂರು, ಮಂಜುಳ, ಶೆಟ್ಟಹಳ್ಳಿ ಸುರೇಶ್, ಲಕ್ಷ್ಮೀ ಹಾಸನ್ ಮುಂತಾದ ನಟರು ಕಾಣಿಸಿಕೊಳ್ಳಲಿದ್ದಾರೆ.ಈ ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರರಿಗೆ ಅವಕಾಶ ನೀಡಲಾಗಿದ್ದು,ಮೈಸೂರು ಸೇರಿದಂತೆ ಶ್ರೀರಂಗಪಟ್ಟಣ ಸುತ್ತಮುತ್ತ ಮೂರು ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.