ನವದೆಹಲಿ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ೨೦೨೮ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಮುಂದಿನ ಒಲಿಂಪಿಕ್ಸ್ ವೇಳೆಗೆ ಅವರಿಗೆ ೩೩ ವರ್ಷ ಆಗಲಿದೆ. ಆ ವೇಳೆಗೆ ಗಾಯದ ಸಮಸ್ಯೆ ಇಲ್ಲದಿದ್ದರೆ ಮೂರನೇ ಪದಕ ಗೆಲ್ಲಲು ಕಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕದ ನಿರೀಕ್ಷೆಯೊಂದಿಗೆ ಸಿಂಧು ಕಣಕ್ಕಿಳಿದಿದ್ದರು. ಆದರೆ ಕ್ರೀಡಾಕೂಟದ ಪ್ರಿ ಕ್ವಾರ್ಟರ್ನಲ್ಲೇ ಹೊರಬಿದ್ದರು.