ದೇವನಹಳ್ಳಿ: ಬಲವಂತವಾಗಿ ರೈತರ ಭೂಸ್ವಾಧೀನ ಮಾಡಿಕೊಂಡು ಬಂಡವಾಳ ಶಾಹಿಗಳಿಗೆ ಮಾರಿಕೊಳ್ಳುವ ಹುನ್ನಾರ ನಡೆದಿದೆ, ಈಗಿನ ಕಾಂಗ್ರೆಸ್ ಸರ್ಕಾರದ ಭೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕೂಡಲೇ ರಾಜೀನಾಮೆ ನೀಡಬೇಕು, ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಡೆಯನ್ನು ವಿರೋಧಿಸಿ ರಾಜ್ಯ ಮಟ್ಟದ ಭೂಸ್ವಾಧೀನ ವಿರೋಧಿ ಹೋರಾಟ ನಡೆಸಲಾಯಿತು, ರೈತರ ಸಭೆ ನಡೆಸಿ ಮುಖ್ಯಮಂತ್ರಿಗಳ ಮನೆಗೆ ಜಾಥಾ ಹೊರಡಲು ಸಿದ್ದರಾದಾಗ ಪೋಲೀಸರು ಅವರನ್ನು ವಶಪಡಿಸಿಕೊಂಡರು, ಪೋಲೀಸರ ಎಳೆದಾಟದಲ್ಲಿ ಕೆಲವು ರೈತರಿಗೆ ಗಾಯಗಳಾದವು.
ಚನ್ನರಾಯಪಟ್ಟಣ ರೈತರ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಗೆ ಬೆಂಬಲ ವ್ಯಕ್ತಪಡಿಸಿ, ಹಲವಾರು ರೈತಪರ, ಕನ್ನಡಪರ, ದಲಿತಪರ ಸಂಘಟನೆಗಳ ಸುಮಾರು ೧ಸಾವಿರಕ್ಕೂ ಅಧಿಕ ಜನ ದೇವನಹಳ್ಳಿ ಟೌನ್ ಹಳೇ ಬಸ್ ನಿಲ್ದಾಣದಲ್ಲಿ ಭಾಗವಹಿಸಿ ಫ್ರತಿಭಟನೆ ನಡೆಸಿದರು, ಈ ಸಮಯದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ದ ಹರಿಹಾಯ್ದರು.
ರೈತರನ್ನು ಅವಮಾನಿಸಿದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಈ ಕೂಡಲೇ ರಾಜಿನಾಮೆ ನೀಡಿ ರಾಜ್ಯ ಸರ್ಕಾರ ಭೂಸ್ವಾಧೀನವನ್ನು ಕೈಬಿಡಬೇಕು ಇಲ್ಲವಾದಲ್ಲಿ ಹಸಿರು ಸೇನೆ, ಕನ್ನಡಪರ ಸಂಘಟನೆ ಇನ್ನೂ ಹಲವಾರು ಸಂಘಟನೆಗಳು ಬೆಂಬಲದೊಂದಿಗೆ ಸುಮಾರು ರೈತ ಮಹಿಳೆಯರು ಸೇರಿದಂತೆ ೫ ಸಾವಿರ ಹೋರಾಟಗಾರರು ಚನ್ನರಾಯಪಟ್ಟಣ ರೈತರಿಗೆ ಬೆಂಬಲಿಸಿ ಶಾಂತಿಯುತವಾಗಿ ಹೋರಾಟ ಮಾಡಿದರು ಭೂ ಸ್ವಾಧೀನ ಇದೇ ರೀತಿ ಮುಂದೆವರೆದರೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೃಷಿ ಭೂಮಿ ಉಳಿಯುವುದಿಲ್ಲ ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿ ಹಸಿವಿನಿಂದ ಸಾಯುವ ಪರಿಸ್ಥಿತಿ ಬರುತ್ತದೆ, ನಮ್ಮ ಭೂಮಿ ನಮ್ಮ ಹಕ್ಕು ಎಂದು ಅಗ್ರಹಿಸಿದರು.
ರೈತ ಸಂಘದ ಮಹಿಳಾ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ ರೈತರು ಹೋರಾಟ ಪ್ರಾರಂಭ ಮಾಡಿ ೮೪೨ಕ್ಕೂ ಹೆಚ್ಚು ದಿನಕಳೆದರೂ ಯಾವುದೇ ಕ್ರಮ ಕೈಗೊಳ್ಲದ ಸರ್ಕಾರ, ಈ ಹೋರಾಟಕ್ಕೆ ಬೂಸ್ವಾದೀನ ಬೇಡವೆಂದರೂ ೨ ಹಳ್ಳಿಗಳಿಗೆ ಕೊನೆಯ ನೋಟಿಸ್ ಕೊಟ್ಟಿರುವುದು ಯಾವ ನ್ಯಾಯ, ಚನ್ನರಾಯಪಟ್ಟಣದ ರೈತರ ಕೂಗು ಸಿದ್ದರಾಮಯ್ಯರಿಗೆ ಕೇಳಿಸಲಿಲ್ಲವೋ ಎಂದು ಅವರ ಮನೆಗೆ ಜಾಥ ಹೊರಟಿದ್ದೆವು, ಪೋಲೀಸ್ ಅನೇಕ ಜನ ರೈತ ಹೋರಾಟಗಾರರಿಗೆ ನೋಟೀಸ್ ನೀಡಿದ್ದಾರೆ, ರೈತರೇನು ದರೋಡೆ ಮಾಡಿದ್ದಾರೆಯೇ, ನಿಜಕ್ಕೂ ರಾಜ್ಯದಲ್ಲಿ ಸರ್ಕಾರವಿದೆಯೋ-ಇಲ್ಲವೋ, ಆಭಿವೃದ್ಧಿ ಹೆಸರಿನಲ್ಲಿ ಹೂವು, ಹರ್ಣಣು ತರಕಾರಿ ಬೆಳೆಯುವ ರೈತರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದರು.
ಈ ಹೋರಾಟದ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ಆಪ್ತ ಸಲಹೆಗಾರ ಬಿ.ಆರ್. ಪಾಟೀಲ್ ರೈತರನ್ನುದ್ದೇಶಿಸಿ ಮಾತನಾಡಿ. ನಾನು ಮುಖ್ಯಮಂತ್ರಿಗಳ ಆಪ್ತ ಸಲಹೆಗಾರರಾಗಿ ಆಗಮಿಸಿಲ್ಲ ಮೊದಲಿನಿಂದಲೂ ಅನೇಕ ರೈತ ಹೋರಾಟಗಳಲ್ಲಿ ಪಾಲ್ಗೊಂಡಿದ್ದೇನೆ, ನಾನು ಈ ದಿನ ರೈತರ ಹೋರಾಟದಲ್ಲಿ ಭಾಗವಹಿಸಲು ಬಂದಿದ್ದೇನೆ, ಮುಂದೆ ಮುಖ್ಯಮಂತ್ರಿಗಳ ಜೊತೆ ನಿಮ್ಮ ಎಲ್ಲಾ ಮುಖಂಡರ ಜೊತೆ ಒಂದು ಸಭೆಯನ್ನು ಏರ್ಪಡಿಸಿ ಕೂಲಂಕುಷವಾಗಿ ಮಾತನಾಡೋಣ ಎಂದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ರೈತ ಸಂಘದ ಮುಖಂಡರು ಚುಕ್ಕಿ ನಂಜುಡಸ್ವಾಮಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿಶಂಕರ್, ಮುಖಂಡ ಕಾರಹಳ್ಳಿ ಶ್ರೀನಿವಾಸ್, ಅತ್ತಿಬೆಲೆ ನರಸಪ್ಪ, ತಿಮ್ಮರಾಯಪ್ಪ, ರೈತ ಸಂಘ ಹಸಿರು ಸೇನೆಯ ಯುವ ಘಟಕದ ರಾಜ್ಯಾಧ್ಯಕ್ಷ ವಿನೋದ್ಕುಮಾರ್ ಗೌಡ್ರು, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಯಶವಂತ್, ಹೆಚ್.ಎನ್. ನಾಗಭೂಷಣ್, ವಕೀಲರ ಸಂಘದ ರಾಜ್ಯಾಧ್ಯಕ್ಷ ಹರೀಂದ್ರ, ರೈತ ಮುಖಂಡ ಕೆ.ಟಿ. ಗಂಗಾಧರ್, ಚಂದ್ರ ತೇಜಸ್ವಿ, ಚನ್ನರಾಯಪಟ್ಟಣ ಗ್ರಾಮಪಂಚಾಯತಿ ಅಧ್ಯಕ್ಷ ಮಾರೇಗೌಡ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡ ನಲ್ಲಪ್ಪನಹಳ್ಳಿ ನಂಜಪ್ಪ, ದಸಂಸ ರೈತ ಹೋರಾಟ ಮುಖಂಡರಾದ ತಿಮ್ಮರಾಯಪ್ಪ, ಹಲವಾರು ರೈತ ಹೋರಾಟಗಾರರು ಭಾಗವಹಿಸಿದ್ದರು.