ಆತ ಕಾಲಿಗೆ ಪ್ಯಾಡ್ ಕಟ್ಟಿಕೊಂಡು, ತೆಲೆಗೆ ಹೆಲ್ಮೆಟ್ ಧರಿಸಿ ಬ್ಯಾಟ್ ಬೀಸುತ್ತಾ ಗ್ರೌಂಡ್ಗೆ ಕಾಲಿಟ್ಟರೆ ಸಾಕು, ಪ್ರೇಕ್ಷಕರ ಗ್ಯಾಲರಿಯಿಂದ ‘ರೋಹಿತ್.. ರೋಹಿತ್..’ ಎಂಬ ಹರ್ಷೋದ್ಗಾರ. ಮೈದಾನದಲ್ಲಿ ವೇಗಿಗಳು, ಸ್ಪಿನ್ನರ್ಗಳು ಎಂಬುದನ್ನು ಲೆಕ್ಕಿಸದೇ ಆತ ಬ್ಯಾಟ್ ಬೀಸುತ್ತಿದ್ದ ಪರಿ ನೋಡಿಯೇ ಕ್ರಿಕೆಟ್ ಜಗತ್ತು ಆತನನ್ನು ರೋ’ಹಿಟ್’ ಶರ್ಮಾ ಎಂದು ಕರೆಯುತ್ತದೆ.
ಆದರೀಗ ರೋಹಿತ್ ಶರ್ಮಾ ಜಮಾನಾ ಮುಗಿಯುತ್ತಾ ಬಂದಿದೆ ಎಂದು ಭಾಸವಾಗುತ್ತಿದೆ. ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ಅವರ ಅಭಿಮಾನಿಗಳಲ್ಲಿ ಮಾತ್ರವಲ್ಲದೇ ರೋಹಿತ್ ಶರ್ಮಾ ಮಾತ್ರವಲ್ಲದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲೂ ತೀವ್ರ ನಿರಾಸೆ ಮೂಡಿಸಿದೆ.