ಬೆಳಗಾವಿ: ವಿಧಾನಮಂಡದಲ್ಲಿ ಇವತ್ತಿನ ಕಾರ್ಯಕಲಾಪ ಶುರುವಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇತ್ತೀಚಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಸಿಬಿಐ ಮೇಲೆ ಭಾರೀ ವಿಶ್ವಾಸ ಬಂದಂತಿದೆ; ಮುಡಾ ಹಗರಣ, ಅನ್ವರ್ ಮಣಿಪ್ಪಾಡಿ ಅವರು ವಕ್ಫ್ ಬಗ್ಗೆ ನೀಡಿರುವ ವರದಿ ಮತ್ತು ತನ್ನ ಮೇಲೆ ₹ 150 ಕೋಟಿ ಆರೋಪ-ಎಲ್ಲವನ್ನೂ ಅವರು ಸಿಬಿಐ ತನಿಖೆಗೆ ನೀಡಲಿ, ಪ್ರಧಾನ ಮಂತ್ರಿಯವರು ತನಿಖೆ ಮಾಡಿಸಲಿ ಅಂತ ಹೇಳೋದ್ಯಾಕೆ, ಮುಖ್ಯಮಂತ್ರಿಯವರ ಗೊಡ್ಡು ಬೆದರಿಕೆಗಳಿಗೆ ಹೆದರಿ ಓಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು