ಮೈಸೂರು: ಮುಡಾದಲ್ಲಿ ಕೆಲವು ಸೈಟ್ಗಳ ದಾಖಲಾತಿಗಳನ್ನು ಸುಟ್ಟು ಹಾಕಿದ್ದಾರೆ. ೫೦:೫೦ ಅನುಪಾತದಲ್ಲಿ ಮನೆ ಕಟ್ಟುವುದಕ್ಕೆ ಅನುಮತಿ ಕೊಡಬೇಡಿ ಎಂದು ಶಾಸಕ ಶ್ರೀವತ್ಸ ಒತ್ತಾಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀವತ್ಸ ಅವರು, ಕೆಲವು ಸೈಟ್ಗಳ ದಾಖಲೆಗಳ ತೆಗೆದುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಮುಡಾ ಸಭೆಯಲ್ಲೇ ಅಧಿಕಾರಿಗಳು ಇದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ನಡುವೆ ೫೦:೫೦ ಅನುಪಾತದಲ್ಲಿ ಮನೆ ನಿರ್ಮಿಸಲು ನಕ್ಷೆಗೆ ಅನುಮತಿ ಕೊಡುವುದನ್ನು ನಿಲ್ಲಿಸಬೇಕು. ಈಗಾಗಲೇ ನಕ್ಷೆಗೆ ಅನುಮತಿ ಪಡೆದು ಕಾಮಗಾರಿ ಮಾಡುತ್ತಿರುವವರಿಗೆ ತಡೆಯಾಜ್ಞೆ ನೀಡಿ ಎಂದು ಮನವಿ ಮಾಡಿ ಪತ್ರ ಕೊಟ್ಟಿದ್ದಾರೆ.
ನನಗಿರುವ ಮಾಹಿತಿ ಪ್ರಕಾರ ೨೫೦ ರಿಂದ ೩೦೦ ಮಂದಿ ಮನೆ ಕಟ್ಟುವುದಕ್ಕೆ ಪ್ಲಾನ್ ಮಾಡಿದ್ದಾರೆ. ಖಾಲಿ ಸೈಟ್ ಇದ್ದರೆ ಮುಡಾ ಜಪ್ತಿ ಮಾಡಿಕೊಳ್ಳುವುದು ಸುಲಭ ಆಗುತ್ತದೆ. ಒಂದು ವೇಳೆ ನಿರ್ಮಾಣ ಕಾಮಗಾರಿ ಆಗುತ್ತಿದ್ದರೆ ಅದನ್ನು ಕಟ್ಟದಂತೆ ತಡೆಯಬೇಕಾಗುತ್ತದೆ. ಈ ಎರಡೂ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾನು ಮನವಿ ಪತ್ರ ಕೊಟ್ಟಿದ್ದೇನೆ ಎಂದು ಹೇಳಿದರು.