ಬೆಳಗಾವಿ: ಇತ್ತೀಚಿಗೆ ಬಂಧನಕ್ಕೊಳಗಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಪಕ್ಷದ ಶಾಸಕ ನರೇಂದ್ರ ಸ್ವಾಮಿ ಪೀಠವನ್ನು ಕೋರಿದಾಗ ಸದನದಲ್ಲಿ ಗದ್ದಲಮಯ ಸನ್ನಿವೇಶ ಸೃಷ್ಟಿಯಾಗಿತ್ತು. ಮುನಿರತ್ನ ಬಗ್ಗೆ ರೋಷದಿಂದ ಮಾತಾಡಿದ ನರೇಂದ್ರ ಸ್ವಾಮಿ, ಬಿಜೆಪಿ ಶಾಸಕ ಜಾತಿ ನಿಂದನೆ ಮಾಡಿದ್ದಾರೆ, ಸದನದ ಬಗ್ಗೆ ಅಗೌರವದಿಂದ ಮಾತಾಡಿದ್ದಾರೆ, ಒಬ್ಬ ಮಾಜಿ ಮುಖ್ಯಮಂತ್ರಿಯವರನ್ನು ಅಪಮಾನಿಸಿದ್ದಾರೆ ಮತ್ತು ವಿರೋಧ ಪಕ್ಷದ ನಾಯಕನ ಬಗ್ಗೆಯೂ ಅವಹೇಳನಕಾರಿಯಾಗಿ ಮಾತಾಡಿದ್ದಾರೆ, ಅವರ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಅನ್ನುತ್ತಾರೆ.