ರಾಮನಗರ: ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ಹೆಚ್.ಡಿ.ದೇವೇಗೌಡರಲ್ಲ. ಜನರನ್ನು ದಾರಿ ತಪ್ಪಿಸುವುದು ಬೇಡ ಎಂದು ಸಚಿವ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದ ಜಮೀರ್, ಮೀಸಲಾತಿ ಕೊಟ್ಟಿದ್ದು ದೇವೇಗೌಡರಲ್ಲ. ಅದನ್ನ ವೀರಪ್ಪ ಮೊಯ್ಲಿ ಕೊಟ್ಟಿದ್ದು. ದೇವೇಗೌಡರಿಗೆ ಮನವಿ ಮಾಡ್ತೇನೆ. ಜನರನ್ನು ದಾರಿತಪ್ಪಿಸೋದು ಬೇಡ. 1994 ರಲ್ಲಿ ವೀರಪ್ಪ ಮೊಯ್ಲಿ ಕೊಟ್ಟಿದ್ದು. ಹಿಂದುಳಿದ ವರ್ಗಗಳ ಆಯೋಗಕ್ಕೆ ಮೀಸಲಾತಿ ಕುರಿತು ವರದಿ ಕಳುಹಿಸಿದ್ರು. ಆಗ ಸರ್ಕಾರ ಹೋಯ್ತು. ಸರ್ಕಾರ ಹೋದ ಮೇಲೆ ದೇವೇಗೌಡರು ಬಂದ್ರು. ವೀರಪ್ಪ ಮೊಯ್ಲಿ ಶೇ. 6ಕ್ಕೆ ರೆಕ್ಮೆಂಡ್ ಮಾಡಿದ್ದರು. ಆದ್ರೆ ದೇವೇಗೌಡರು ಕೊಟ್ಟಿದ್ದು ಕೇವಲ ಶೇ 4 ರಷ್ಟು ನಮಗೆ ದೇವೇಗೌಡರು ಮೋಸ ಮಾಡಿದ್ದಾರೆ.
ದೇವೇಗೌಡರಿಗೆ ಜಮೀರ್ ಅಹಮದ್ ಟಾಂಗ್ ಕೊಡುತ್ತಾ, 25 ರಿಂದ 30 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಕುಮಾರಸ್ವಾಮಿಗೆ ಮುಸ್ಲಿಂ ವೋಟ್ ಬೇಕಿಲ್ಲ. ಅಲ್ಪಸಂಖ್ಯಾತರ ವೋಟ್ ಬೇಕಿಲ್ಲ. ಅವರು ಮಾತಾಡಿರೋ ವೀಡಿಯೋ ಇದೆ. ಯಾವ ಮುಖ ಇಟ್ಕೊಂಡು ಮುಸಲ್ಮಾನರ ವೋಟ್ ಕೇಳ್ತಾರೆ? ಯತ್ನಾಳ್ ಮುಸಲ್ಮಾನರು, ಗಡ್ಡ ಬಿಟ್ಟವರು, ಟೋಪಿ ಹಾಕಿದವ್ರು ನಮ್ಮ ಹತ್ತಿರ ಬರೋದು ಬೇಡ ಅಂತ ಹೇಳಿದ್ದಾರೆ. ಅವರನ್ನ ಒಪ್ಪಿಸೋಕೆ ಹೇಳಿ ಬಿಜೆಪಿ ಅವರು ಮುಸಲ್ಮಾನರ ಪರವಾಗಿದ್ದೆವು ಎಂದು ಒಪ್ಪಿಸಲು ಹೇಳಿ. ಆಗ ಮುಸಲ್ಮಾನರು ಅವರ ಪಕ್ಷಕ್ಕೆ ವೋಟ್ ಹಾಕಲು ಚಿಂತನೆ ಮಾಡ್ತಾರೆ ಎಂದರು. ಯೋಗೇಶ್ವರ್ ಈ ತಾಲೂಕಿನಲ್ಲಿ ಕೆಲಸ ಮಾಡಿದ್ದಾರೆ. ಕೆರೆ ತುಂಬಿಸಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡ್ತಾ ಇದ್ರು ಅಂತ ಜನ ಹೇಳ್ತಾ ಇದ್ದಾರೆ. ಭಾವನಾತ್ಮಕವಾಗಿ ಮತ ಕೇಳೋದು ಅವರಿಗೆ ಮೊದಲಿನಿಂದಲೂ ಬಂದಿದೆ ಎಂದು ಆರೋಪಿಸಿದರು.