ಬೆಂಗಳೂರು: ಮೆಟ್ರೋ ರೈಲು ನಿರ್ವಹಣೆ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಹೇಳಿರುವ ಮಾಜಿ ಸಂಸದ ಕಾಂಗ್ರೆಸ್ನ ಡಿ.ಕೆ.ಸುರೇಶ್ ದರ ಏರಿಕೆ ಮೂಲಕ ಬೆಂಗಳೂರಿಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ರಾಜ್ಯದ ಸಂಸದರು ಏರಿಸಿರುವ ಮೆಟ್ರೋ ಪ್ರಯಾಣ ದರವನ್ನು ಕಡಿಮೆ ಮಾಡಲು ಕೇಂದ್ರದ ಮೇಲೆ ಒತ್ತಡ ತರಲಿ ಎಂದು ಆಗ್ರಹಿಸಿದ ಅವರು, ಸುಖಾಸುಮ್ಮನೆ ಮೆಟ್ರೋ ಸ್ಟೇಷನ್ಗಳ ಮುಂದೆ ಪ್ರತಿಭಟನೆ ಹೆಸರುಗಳಲ್ಲಿ ಡ್ರಾಮಾ ಮಾಡುವುದನ್ನು ಬಿಡಲಿ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕ ಮುನಿರತ್ನ ಪತ್ರ ಮುಖೇನ ಆರೋಪ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಷಯ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದ ಅವರು, ನಾನು ಯಾವುದೇ ಹುದ್ದೆ ಆಕಾಂಕ್ಷಿಯಲ್ಲ. ನನಗೆ ಜನ ವಿಶ್ರಾಂತಿ ನೀಡಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಸುರೇಶ್ ಉತ್ತರಿಸಿದ್ದಾರೆ.