ಬೆಂಗಳೂರು: ಗುಣಾತ್ಮಕ ಶಿಕ್ಷಣ ನೀಡುವಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುವ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆ ಮೆಡಿಕಲ್ ಕಾಲೇಜು ಪ್ರಾರಂಭಿಸುವ ಮೂಲಕ ದೇಶಕ್ಕೆ ವೈದ್ಯಕೀಯ ಸೇವೆ ನೀಡಲಿ ಎಂದು ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್.ಕೆ.ಪಾಟೀಲ್ ಹೇಳಿದರು.
ಬೆಂಗಳೂರಿನ ಐಟಿಪಿಎಲ್ ರಸ್ತೆಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ಧ್ವನಿ ಸಭಾಂಗಣದಲ್ಲಿ ಇಂದು ನಡೆದ 33ನೇ ಸಿಎಂಆರ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್.ಕೆ.ಪಾಟೀಲ್ ಅವರು ಸಂಸ್ಥಾಪನಾ ದಿನದ ನೆನಪಿಗಾಗಿ ‘’ಬ್ರಷಸ್ ಅಂಡ್ ಬಿಯಾಂಡ್’’ ಕಲಾಕೃತಿಗಳ ಪುಸ್ತಕ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು ಕಳೆದ ಮೂರುದಶಕಗಳಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ.ಕೆ.ಸಿ.ರಾಮಮೂರ್ತಿ ಅವರು ಪೊಲೀಸ್ ಅಧಿಕಾರಿಯಾಗಿದ್ದಾಗ ಜನಪರವಾಗಿದ್ದರು ಈಗ ಅವರ ತಂದೆ ಚಿಕ್ಕಮುನಿಯಪ್ಪ ರೆಡ್ಡಿಯವರ ದೂರದೃಷ್ಟಿಯಂತೆ ದೇಶ-ವಿದೇಶಗಳಲ್ಲಿ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ರಾಷ್ಟ್ರ ಸೇವೆಯ ಕೆಲಸ ಮಾಡುತ್ತಿದ್ದಾರೆ. ಮುಂದೆ ಸಿಎಂಆರ್ ಮೆಡಿಕಲ್ ಕಾಲೇಜು ಪ್ರಾರಂಭಿಸಿ ದೇಶಕ್ಕೆ ಅತ್ಯಗತ್ಯ ವೈದ್ಯಕೀಯ ಸೇವೆ ನೀಡುವಂತಾಗಲಿ ಎಂದು ಆಶಿಸಿದರು.
ಸಿಎಂಆರ್ ಸಂಸ್ಥಾಪನಾ ದಿನದ ಸ್ಮರಣಾರ್ಥ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಕಳೆದ 5 ವರ್ಷಗಳಿಂದ 25 ವರ್ಷಗಳ ದೀರ್ಘಾವಧಿಯ ಉತ್ತಮ ಸೇವೆ ಸಲ್ಲಿಸಿದ ಬೋಧಕರಿಗೆ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಸೇವಾ ಪುರಸ್ಕಾರ ಫಲಕ ನೀಡಿ ಆಡಳಿತ ಮಂಡಳಿ ಗೌರವಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಡಾ.ಸವಿತಾ ರಾಮಮೂರ್ತಿ, ಅಧ್ಯಕ್ಷರುಸಿಎಂಆರ್ ಜ್ಞಾನಧಾರ ಟ್ರಸ್ಟ್, ಕುಲಾಧಿಪತಿ ಸಿಎಂಆರ್ ವಿಶ್ವವಿದ್ಯಾಲಯ ಇವರು ಮಾತನಾಡಿ ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಿಎಂಆರ್ ಶಿಕ್ಷಣ ಸಂಸ್ಥೆ ಇಂದು ಸಮೂಹ ಸಂಸ್ಥೆಗಳ ರೂಪದಲ್ಲಿ ಬೆಳೆದು ನಿಂತಿದೆ. ಈ ಸಾಧನೆಯ ಹಿಂದೆ ನಮ್ಮ ಸಂಸ್ಥೆಯ ಸಿಬ್ಬಂದಿಗಳ ಪರಿಶ್ರಮವಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಡಾ.ಕೆ.ಸಿ.ರಾಮಮೂರ್ತಿ, ಐಪಿಎಸ್ (ನಿವೃತ್ತ), ಅಧ್ಯಕ್ಷರು, ಸಿಎಂಆರ್ ಸಮೂಹಶಿಕ್ಷಣ ಸಂಸ್ಥೆಗಳು ಮತ್ತು ಸಿಎಂಆರ್ ವಿಶ್ವವಿದ್ಯಾ
ಲಯ, ಸಿಎಂಆರ್ ಸಿಇಓ ಶ್ರೀಜಯದೀಪ್ ಕೆ.ಆರ್ ರೆಡ್ಡಿ, ಪ್ರೊವೋಸ್ಟ್ ಡಾ.ತ್ರಿಸ್ತಾ ರಾಮಮೂರ್ತಿ, ಟ್ರಸ್ಟಿ ಡಾ.ಕೆ.ಸಿ.ರಾಜುರೆಡ್ಡಿ, ಸಿಎಂಆರ್ ಜ್ಞಾನಧಾರ ಟ್ರಸ್ಟ್ ಕಾರ್ಯದರ್ಶಿ ಕೆ.ಸಿ.ಜಗನ್ನಾಥ ರೆಡ್ಡಿ, ನಿರ್ದೇಶಕರಾದ ಶ್ರೀಮತಿ ಶ್ರೇಯಾ ರೆಡ್ಡಿ, ಕುಲಪತಿ ಡಾ.ಎಚ್.ಬಿ.ರಾಘವೇಂದ್ರ ಉಪಸ್ಥಿತರಿದ್ದರು.