ಡಿಸೆಂಬರ್ 9 ರಿಂದ ಬೆಳಗಾವಿಯಲ್ಲಿ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನಕ್ಕೊ ಮೊದಲು ಪೂರ್ವ ಭಾವಿ ಎನ್ನುವಂತೆ ರಾಜ್ಯದ ಆಡಳಿತದ ಶಕ್ತಿ ಕೇಂದ್ರದಲ್ಲಿ ಗುರುವಾರ ಮಿನಿ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ. ಇದೇನು ಚಳಿಗಾಲದ ಅಧಿವೇಶನ ಈ ಬಾರಿ ಬೆಂಗಳೂರಿನಲ್ಲಿ ಅಂದುಕೊಂಡರೆ ಅದು ತಪ್ಪು.
ಇಷ್ಟೆಲ್ಲ ಪೀಠಿಕೆ ಹಾಕಲಿಕ್ಕೆ ಕಾರಣ ವಿಧಾನಪರಿಷತ್ನಲ್ಲಿ ಹೊಸದಾಗಿ ಸೃಷ್ಟಿಯಾಗಿಯಾಗಿರುವ ಕಾರ್ಯದರ್ಶಿ – 2ರ ಹುದ್ದೆ. ಈವರೆಗೆ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಕಾರ್ಯದರ್ಶಿ ಹುದ್ದೆ ಒಂದು ಮಾತ್ರ ಇತ್ತು. ಆದರೆ ವಿಧಾನಪರಿಷತ್ನಲ್ಲಿ ಕಳೆದ ತಿಂಗಳು ಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿಯವರು ಕಾರ್ಯದರ್ಶಿ ಹುದ್ದೆಯನ್ನು ಆಡಳಿತಾತ್ಮಕ ಹಾಗೂ ಕಾನೂನು ದೃಷ್ಠಿಯಿಂದ ಈ ಹಿಂದೆ ಇದ್ದ ಕಾರ್ಯದರ್ಶಿ 2 ಹುದ್ದೆಯನ್ನು ಮರು ಸೃಷ್ಟಿಸಿದರು. ಪರಿಷತ್ತಿನಲ್ಲಿ ಎರಡು ಹುದ್ದೆಯನ್ನು ಸೃಷ್ಟಿ ಮಾಡಿದ್ದೆ ಈ ಮಿನಿ ಅಧಿವೇಶನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ವಿಧಾನ ಪರಿಷತ್ತಿನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಮಹಾಲಕ್ಷ್ಮಿ ಅವರ ಹುದ್ದೆಗೆ ಪರ್ಯಾಯವಾಗಿ ಕಾರ್ಯದರ್ಶಿ 2ರ ಹುದ್ದೆಗೆ ನಿರ್ಮಲಾ ಅವರನ್ನು ಬಡ್ತಿ ಕೊಟ್ಟು ಹೊಸ ಹುದ್ದೆ ಸೃಷ್ಟಿ ಮಾಡಿದ್ದೆ ಈ ಅವಾಂತರಕ್ಕೆ ಕಾರಣ ಎಂದು ಪರಿಷತ್ತಿನ ಮೊಗಸಾಲೆಯಲ್ಲಿ ಕೇಳಿ ಬರುತ್ತಿದೆ. ಗುರುವಾರ ಮಧ್ಯಾಹ್ನ ಪರಿಷತ್ತಿನ ನೌಕರರ ಸಂಘದ ಪದಾಧಿಕಾರಿಯೊಬ್ಬ ಕಾರ್ಯದರ್ಶಿ ಮಹಾಲಕ್ಷ್ಮಿ ಅವರ ಕೊಠಡಿಯಲ್ಲಿ ಹೊಸದಾಗಿ ಸೃಷ್ಟಿಯಾದ ಕಾರ್ಯದರ್ಶಿ 2 ಹುದ್ದೆಗೆ ನೇಮಕಗೊಂಡಿರಿವ ನಿರ್ಮಲ ಅವರ ವಿರುದ್ಧ ಕೆಲವರು ಏರುಧ್ವನಿಯಲ್ಲಿ ಮಾತನಾಡಿ ಅವರ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.