ಬೆಂಗಳೂರು: ನಿನ್ನೆ ಸಂಜೆ ಸಾಕಿದ್ದ ದನಗಳಿಗೆ ಮೇವನ್ನು ಹಾಕುವ ಸಮಯದಲ್ಲಿ ಚಿರತೆಯೊಂದು ಮಹಿಳೆ ಒಬ್ಬರನ್ನು ಅರ್ಧ ತಿಂದು ಬಿಸಾಡಿ ಓಡಿ ಹೋಗಿರುವ ಘಟನೆ ಡಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕರಿಯಮ್ಮ(45) ವರ್ಷದ ಮಹಿಳೆ ಸಿಕೆ ಪಾಳ್ಯ ಹಳ್ಳಿಯಲ್ಲಿ ವಾಸವಿದು ಜೀವನೋಪಾಯಕ್ಕಾಗಿ ದನ/ ಹಸುಗಳನ್ನು ಸಾಕಿಕೊಂಡು ನಡೆಸುತ್ತಿದ್ದರು.
ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಅರಣ್ಯ ಇಲಾಖೆಯವರು ಮತ್ತು ಪೊಲೀಸರು ಚಿರತೆಯನ್ನು ಸರೆ ಯಿಡಿಯಲು ಕಾರ್ಯತಂತ್ರ ರೂಪಿಸಿರುತ್ತಾರೆ.ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿರುತ್ತಾರೆ.