ಬೆಳಗಾವಿ: ಖಾಸಗಿ ಹಣಕಾಸು ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಮೈಕ್ರೋ ಮತ್ತು ಮ್ಯಾಕ್ರೋ ಫೈನಾನ್ಸಿಂಗ್ ಸಂಸ್ಥೆಗಳು ಬಡ ಮಹಿಳೆಯರ ರಕ್ತ ಹೀರುತ್ತಿವೆ, ಅವು ಶೇಕಡ 40ರಷ್ಟು ಬಡ್ಡಿಯನ್ನು ಮಹಿಳೆಯರಿಂದ ವಸೂಲು ಮಾಡುತ್ತಿವೆ, ಅವುಗಳ ಮರ್ಮ ಅರ್ಥ ಮಾಡಿಕೊಳ್ಳದೆ ಅನೇಕ ಮಹಿಳೆಯರು ತಮ್ಮ ಮನೆಗಳನ್ನು ಹಾಳು ಮಾಡಿಕೊಂಡಿದ್ದಾರೆ, ಮಹಿಳೆಯರನ್ನು ಹಣಕಾಸು ಸಂಸ್ಥೆಗಳ ಕಪಿಮುಷ್ಠಿಯಿಂದ ಬಿಡಿಸಬೇಕಾದರೆ ಅವುಗಳನ್ನು ಬ್ಯಾನ್ ಮಾಡಬೇಕು ಇಲ್ಲವೇ ಪರವಾನಗಿ ನೀಡುವುದನ್ನು ನಿಲ್ಲಿಸಬೇಕೆಂದು ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಸದನದಲ್ಲಿ ಹೇಳಿದರು.