ದಿನಾಂಕ 30-11-2024 ರಂದು ಮೈಸೂರಿನ ಡಾ. ಯಶೋದಾ ಸೇವಾ ಟ್ರಸ್ಟ್ ವತಿಯಿಂದ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಭಾಂಗಣದಲ್ಲಿ, ಅದ್ದೂರಿಯಾಗಿ ಜರುಗಿತು.
ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ, ಕೆಪಿಸಿಸಿಯ ಓಬಿಸಿ ಉಪಾಧ್ಯಕ್ಷರಾದ ಕೆ.ಎಂ.ಮಂಜುನಾಥ್ ಉದ್ಘಾಟಿಸಿ, ಭಾಷಣ ಮಾಡಿ ಸನ್ಮಾನ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಮೈಸೂರು ಮಹಾ ನಗರ ಪಾಲಿಕೆಯ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಹಾಗೂ ಹರೀಶ್ ಗೌಡರು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕ ತರಾದ ಕಾಷ್ಟ ಶಿಲ್ಪಿ ಶ್ರೀ ಮುರಳೀಧರ, ಮತ್ತು ಗೊರವನಹಳ್ಳಿ ಲಕ್ಷ್ಮಿ ಟೆಂಪಲ್ ಮುಖ್ಯಸ್ಥರು, ಟ್ರಸ್ಟಿ ಗಳು ಆದ ಶ್ರೀಮತಿ ಲಕ್ಷ್ಮಿ ಪ್ರಸಾದ್ ಹಾಗೂ ಸಿ.ಟಿ ಆಚಾರ್ಯ, ಮಹಿಳಾ ನಾಯಕಿ ಶ್ರೀಮತಿ ವಸಂತ ಮುರಳಿ, ಟ್ರಸ್ಟ್ ಅಧ್ಯಕ್ಷರಾದ ಯಶೋದಾ ಹಾಜರಿದ್ದರು ಮತ್ತು ಸ್ಥಳೀಯ ಮುಖಂಡರು, ಕನ್ನಡ ಬಂಧುಗಳು ಸಹ ಸಕ್ರಿಯವಾಗಿ, ಪಾಲ್ಗೊಂಡಿದ್ದರು.