ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನ ಹೂಟಗಳ್ಳಿಯಲ್ಲಿರುವ ದಕ್ಷ ಪಿಯುಸಿ ಮತ್ತು ಡಿಗ್ರಿ ಕಾಲೇಜಿನಲ್ಲಿ “ಶೈಕ್ಷಣಿಕ ಮೌಲ್ಯಗಳು ಮತ್ತು ವಿದ್ಯಾರ್ಥಿಗಳ ಮುಂದಿನ ಪ್ರಗತಿಯ ಹಾದಿಗೆ ಅಡಿಪಾಯ” ವಿಚಾರ ಸಂಕಿರಣ ಮತ್ತು ರಾಜ್ಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ಹಾಗೂ ಅಧ್ಯಾಪಕರಿಗೆ ರಾಜ್ಯ ಮಟ್ಟದ “ಶಿಕ್ಷಣ ರತ್ನ” ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ರಾಂತ ಉಪ ಕುಲಪತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಹಾಗೂ ಬಹುಶ್ರುತ ವಿದ್ವಾಂಸರಾದ ಪ್ರೊ . ಮಲ್ಲೇಪುರಂ ಜಿ. ವೆಂಕಟೇಶ್ ಅವರು ನೆರವೇರಿಸಿದರು.
ಇದೇ ವೇಳೆ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ. ಬಿ.ಆರ್ ಹಿರೇಮಠ ರವರ “ಬುದ್ಧ ಬಸವ ಅಂಬೇಡ್ಕರ್” ಕೃತಿ ಲೋಕಾರ್ಪಣೆ ಗೊಳಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ದಕ್ಷ ಕಾಲೇಜಿನ ಅಧ್ಯಕ್ಷರಾದ ಶ್ ಡಾ.ಜಯಚಂದ್ರ ರಾಜು. ಪಿ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾನ್ಯ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಆಪ್ತ ಕಾರ್ಯದರ್ಶಿ ಶೈಲಾ ಕೆ.ಡಿ ಹಾಗೂ ಸಾಹಿತಿ ಮತ್ತು ಚಲನ ಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರೊ. ಮಲ್ಲೆಪುರಂ ಜಿ ವೆಂಕಟೇಶ್ ಅವರಿಗೆ “ಸರ್ವೋತ್ತಮ ಶಿಕ್ಷಣ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.ಡಾ.ಬಿ.ಆರ್.ಹಿರೇಮಠ ರವರಿಗೆ “ಸರ್ವೋತ್ತಮ ಆಡಳಿತ ರತ್ನ” ಹಾಗೂ ಸಾಹಿತಿ ಡಾ.ಗುಣವಂತ ಮಂಜು ರವರಿಗೆ “ಸರ್ವೋತ್ತಮ ಸಾಂಸ್ಕೃತಿಕ ರತ್ನ” ಪ್ರಶಸ್ತಿ, ಶೈಲಾ ಕೆ.ಡಿ ಅವರಿಗೆ “ಆಡಳಿತ ರತ್ನ” ಡಾಜಯಚಂದ್ರ ರಾಜು ಪಿ ಅವರಿಗೆ ” ವಿದ್ಯಾರತ್ನ” ಪ್ರಶಸ್ತಿ.
ಲಭ್ಯವಾಯಿತು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ರವರು ಶೈಕ್ಷಣಿಕ ಮೌಲ್ಯಗಳೇ ಇಂದಿನ ಜಗತ್ತಿಗೆ ಮತ್ತು ಎಲ್ಲಾ ಕಾಲಕ್ಕೂ ಅನ್ವಯಿಸುವ ಮೂಲ ಮಂತ್ರಗಳು. ಶಿಕ್ಷಣದಿಂದಲೇ ಸರ್ವತೋಮುಖ ಅಭಿವೃದ್ಧಿ ಮತ್ತು ಶಿಕ್ಷಣದ ಅಡಿಪಾಯವೇ ಬದುಕನ್ನು ರೂಪಿಸುವ ದೊಡ್ಡ ಮಾನದಂಡ, ಹಾಗೂ ಇಂದು ಮುಂದುವರೆಯುತ್ತಿರುವ ಜಗತ್ತಿಗೆ ಅನೇಕ ರೀತಿಯ ಕೊಡುಗೆಗಳನ್ನು ನೀಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಹಿರಿದಾಗಿದೆ. ವಿದ್ಯಾರ್ಥಿ ಸಮುದಾಯವನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಎಲ್ಲ ಕಾಲಕ್ಕೂ ಅತ್ಯಂತ ಗೌರವ ಪೂರ್ವಕವಾದ ಸ್ಥಾನ ಶಿಕ್ಷಕರದ್ದು ಎಂದು ಬಣ್ಣಿಸಿದರು.
ಬುದ್ಧ ಬಸವ ಅಂಬೇಡ್ಕರ್ ಕೃತಿಯ ಕುರಿತು ಮಾತನಾಡಿದ ಡಾ.ಗುಣವಂತ ಮಂಜು ರವರು ಓದುವ ಪುಸ್ತಕಗಳ ಜೊತೆಗೆ ಬದುಕಿಗೆ ಆದರ್ಶ ಮತ್ತು ಮಾರ್ಗದರ್ಶನ ನೀಡುವ ಬುದ್ಧ ಬಸವ ಅಂಬೇಡ್ಕರ್ ರವರ ಜೀವನ ಸಾಧನೆ ಮತ್ತು ಜಗತ್ತಿಗೆ ನೀಡಿದ ಶಾಂತಿಯ ಬೆಳಕು, ಕ್ರಾಂತಿಯ ಕಹಳೆ ಮತ್ತು ಸಮ ಸಮಾಜದ ಕಲ್ಪನೆ ಇವುಗಳನ್ನು ತಿಳಿದು ನಾವು ನಮ್ಮ ಸ್ಥಾನವನ್ನು ಪಡೆದು ಆ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕಾಗಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಗೌತಮ ರಾಜು, ಅನಿತಾ ಉಮಾ ಶಂಕರ್ ರಾಜು,ಸೋನಿಯಾ ರಾಜು, ಡಾ. ಮಹೇಶ್ ಎಂ. ಬಿ, ಅಭಿಷೇಕ್ ಎಂ, ಹರೀಶ್ ಪಿ ಮುಂತಾದ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಭಾಗಿಯಾಗಿದ್ದರು. ರಾಜ್ಯ ವ್ಯಾಪಿ ಆಗಮಿಸಿದ್ದ ನೂರು ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಮುಖ್ಯಸ್ಥರಿಗೆ ಗೌರವ ಸನ್ಮಾನ ನೀಡಲಾಯಿತು.