ಮೈಸೂರು ಟೌನ್ಹಾಲ್ ಪುರಭವನದಲ್ಲಿ ಓಂ ಶ್ರೀ ಸಾಯಿರಾಂ ಸಾಂಸ್ಕøತಿಕ ಕಲಾವೇದಿಕೆ ಹಾಗೂ ಕನ್ನಡ ಸಂಸ್ಕøತಿ ಇಲಾಖೆ,ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಕಲಾವೇದಿಕೆಯ ಪ್ರದಾನ ಕಾರ್ಯದರ್ಶಿ ಮೈಸೂರು ಮಂಜುಳಾ(ಜೂ.ಮಾಲಾಶ್ರೀ)ರವರ ನೇತೃತ್ವದಲ್ಲಿ 25ನೇ ನಾಟಕೋತ್ಸವ ಕಾರ್ಯಕ್ರಮ ಜರುಗಲಿದೆ.
ಜನವರಿ 16ನೇ ಗುರುವಾರದಂದು ಬೆಳಿಗ್ಗೆ 11ಕ್ಕೆ ಕುರುಕ್ಷೇತ್ರ ನಾಟಕ, ಮಧ್ಯಾಹ್ನ 2 ಗಂಟೆಗೆ ಸಮಾರಂಭದ ಅಧ್ಯಕ್ಷತೆ ವಹಿಸುವವರು ಬೆಂಗಳೂರು ವಿಜಯನಗರ ವಿಧಾನಸಭಾ ಶಾಸಕರಾದ ಎಂ.ಕೃಷ್ಣಪ್ಪನವರು. ಕಾರ್ಯಕ್ರಮದ ಉದ್ಘಾಟ£ ಯನ್ನು ಗೋವಿಂದರಾಜನಗರ ವಿಧಾನಸಭಾ ಶಾಸಕರಾದ ಪ್ರಿಯಕೃಷ್ಣರವರು, ಮುಖ್ಯ ಅತಿಥಿಗಳಾಗಿ ಮಾರುತಿ ಮೆಡಿಕಲ್ಸ್ ಮಹೇಂದ್ರ ಮುನ್ನೋತ್ ಹಾಗೂ ಸಿದ್ಧಪ್ಪ, ಇನ್ನಿತರರು ಜನವರಿ 17 ಶುಕ್ರವಾರದಂದು ಬೆಳಿಗ್ಗೆ 10ಕ್ಕೆ ಕರೋಕೆ ಗಾಯನ ಕಾರ್ಯಕ್ರಮ, ಬೆಳಿಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರು ಶೇಷಾದ್ರಿಪುರಂನ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಅಧ್ಯಕ್ಷರಾದ ಎನ್.ಜಯಲಕ್ಷ್ಮಿರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಗಣ್ಯರಿಂದ ನೆರವೇರಲಿದೆ,
ಸಮಾರಂಭದಲ್ಲಿ ಲಗ್ಗೆರೆ ನಾರಾಯಣಸ್ವಾಮಿ, ಡಾ.ರೇಖಾಅರುಣ್, ಹೆಚ್.ಅಶ್ವತ್ಥ್ನಾರಾಯಣ್, ಲೋಕೇಶ್ವರ್, ಗೋಲ್ಡ್ ರಮೇಶ್ ಹಾಗೂ ಮಧ್ಯಾಹ್ನ 3ಕ್ಕೆ ಹಾಸ್ಯಮಂಜರಿ ಕಾರ್ಯಕ್ರಮ ಏರ್ಪಡಿಸಿದೆ. ಜನವರಿ 18 ಶನಿವಾರದಂದು ಬೆಳಿಗ್ಗೆ 11ಕ್ಕೆ ಕುರುಕ್ಷೇತ್ರ ಪೌರಾಣಿಕ ನಾಟಕ, ಜನವರಿ 19 ಭಾನುವಾರದಂದು ಬೆಳಿಗ್ಗೆ 11ಕ್ಕೆ ಎಲ್ಲಾ ಮುಸ್ಲಿಂ ಕಲಾವಿದರಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಏರ್ಪಡಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಬೇಕೆಂದು ಮೈಸೂರು ಮಂಜುಳಾ (ಜೂ.ಮಾಲಾಶ್ರೀ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.