ಥಾಣೆ: ಮೊಬೈಲ್ ಫೋನ್ ಹೆಚ್ಚು ನೋಡಬೇಡ ಎಂದು ತಾಯಿ ಬೈದಿದ್ದಕ್ಕೆ ಮನೆಬಿಟ್ಟು ಹೋಗಿದ್ದ 15 ವರ್ಷದ ಬಾಲಕಿ ಒಂಬತ್ತು ದಿನಗಳ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಾಲಕಿ ತನ್ನ ಕುಟುಂಬದೊಂದಿಗೆ ಥಾಣೆ ಜಿಲ್ಲೆಯ ಡೊಂಬಿವಿಲಿ ಪ್ರದೇಶದಲ್ಲಿ ವಾಸಿಸುತ್ತಿದ್ದಳು.
ಡಿಸೆಂಬರ್ 5 ರಂದು, ಆಕೆಯ ತಾಯಿ ಮೊಬೈಲ್ ಫೋನ್ನಲ್ಲಿ ಹೆಚ್ಚು ಸಮಯ ಕಳೆಯಬೇಡ ಮತ್ತು ಓದಿನ ಕಡೆ ಗಮನ ಹರಿಸುವಂತೆ ಬುದ್ದಿ ಹೇಳಿದ್ದರು. ಇದರಿಂದ ಕೋಪಕೊಂಡ ಬಾಲಕಿ ಮನೆ ಬಿಟ್ಟು ಹೋಗಿದ್ದಳು ಎಂದು ವಿಷ್ಣುನಗರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.