ಬೆಂಗಳೂರು: ಮೌನಿ ಅಮಾವಾಸ್ಯೆಯ ಪ್ರಯುಕ್ತ ಕೇಂದ್ರ ವಲಯದ ಐಜಿಪಿ ಲಾಬು ರಾಮ್ ಸೇರಿದಂತೆ ಆರು ಜಿಲ್ಲಾ ಎಸ್ ಪಿ ಗಳು ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಗಳು ನಿನ್ನೆ ರಾತ್ರಿ ವಿಶೇಷ ಕರ್ತವ್ಯ ನಿರ್ವಹಿಸಿರುತ್ತೇವೆ ಎಂದು ಲಾಬು ರಾಮ್ ರವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ, ಕೋಲಾರ, ಕೆ.ಜಿ.ಎಫ್. ತುಮಕೂರು, ರಾಮ ನಗರ ಮತ್ತು ಚಿಕ್ಕಬಳ್ಳಾಪುರ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಡೀರಾಪೊತ್ರಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಕರ್ತವ್ಯ ನಿರ್ವಹಿಸಿದೆವು ಎಂದು ತಿಳಿಸಿದರು.ಹೀಗಾಗಿ ಇಡೀ ವಲಯದಲ್ಲಿಯಾವುದೇ ತರಹ ಅಪಘಾತಗಳಾಗಿರಬಹುದು, ದರೋಡೆ ಪ್ರಕರಣಗಳಾಗಿರಬಹುದು,
ಮನೆ ಕಳ್ಳತನ ಗಳಾಗಿರಬಹುದು ಸಂಭವಿಸಿರುವುದಿಲ್ಲವೆಂದು ಮಾಹಿತಿ ನೀಡಿದರು.
ಕೇಂದ್ರ ವಲಯದ ಸುಮಾರು 120 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಆ ಪೊಲೀಸ್ ಠಾಣೆಗಳಿಗೆ ಮೀಸಲಿರುವ ಹೊಯ್ಸಳ ವಾಹನಗಳು ಸೇರಿದಂತೆ ಎಲ್ಲರೂ ನಾಕಾ ಬಂದಿ ರಚಿಸಿ ಯಾವುದೇ ಅಹಿತಕರ ಘಟನೆ ನಡೆದಂತೆ ಕರ್ತವ್ಯ ನಿರ್ವಹಿಸಿರುತೇವೆ ಎಂದು ಇಂದು ಸಂಜೆ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು