ಬೆಂಗಳೂರು: ರಾಜಾಜಿನಗರದ ಶಿವಾಲ ರೆಸಿಡೆನ್ಸಿಯಲ್ಲಿ ಭಾರತ ಸರ್ಕಾರದ ಯುವ ಕಾರ್ಯನೀತಿ ಮತ್ತು ಕ್ರೀಡಾ ವಿಭಾಗದ ನೆಹರು ಯುವ ಕೇಂದ್ರ ಬೆಂಗಳೂರು ನಗರ ಜಿಲ್ಲೆ ಐದು ದಿನಗಳ ಆಯೋಜಿಸಿರುವ ಅಂತರಾಜ್ಯ ಯುವ ವಿನಿಮಯ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂದಿನಿ ಪ್ರಕಶ್ ಅವರು ರಾಜ್ಯ ರಾಜ್ಯದ ಮಧ್ಯೆ ಯುವಜನರ ವಿನಿಮಯ ಕೇವಲ ಯುವ ಜನರ ವಿನಿಮಯವಲ್ಲ ಇದೊಂದು ಸಾಂಸ್ಕೃತಿಕ ವಿನಿಮಯ ಈ ಯುವಜನರು ಒರಿಸ್ಸಾಯಿಂದ ಬಂದರು ಈ ನೆಲದಲ್ಲಿ ಕಾಲಿಟ್ಟ ಕ್ಷಣ ಇವರು ನಮ್ಮ ಕನ್ನಡಿಗರೇ ಏಕೆಂದರೆ ಇವರು ಭಾರತೀಯರು ಆದ್ದರಿಂದ ಇವರು ನಮ್ಮವರೇ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ರಾಯಭಾರಿಗಳು ತಮ್ಮ ಆಲೋಚನೆಗಳು ಅಭಿಪ್ರಾಯಗಳ,ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವ ಮೌಲ್ಯಯುತವಾದ ಕಾರ್ಯಕ್ರಮವು ಸಕಾರಾತ್ಮಕ ತಿಳುವಳಿಕೆ ಮತ್ತು ಸೌಹಾರ್ದತೆಯ ಸಂಬಂಧವನ್ನು ಸ್ಥಾಪಿಸಲಾಗುತ್ತದೆ.
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವು ತಿಳುವಳಿಕೆ ಮತ್ತು ಏಕತೆಯ ದಾರಿದೀಪವಾಗಿ ಅನುಭವಗಳ ಮೂಲಕ ವೈವಿಧ್ಯಮಯ ಜಗತ್ತುಗಳ ಸೇತುವೆಯಾಗಿದೆ. ಇದು ಕೇವಲ ಸಂಪ್ರದಾಯಗಳು, ಭಾಷೆಗಳು ಅಥವಾ ಸಂಪ್ರದಾಯಗಳನ್ನು ವಿನಿಮಯ ಮಾಡಿಕೊಳ್ಳುವ ಬಗ್ಗೆ ಅಲ್ಲ; ಇದು ಮಾನವೀಯತೆಯ ಶ್ರೀಮಂತ ವಸ್ತ್ರದ ಆಳವಾದ ಪರಿಶೋಧನೆಯಾಗಿದೆ. ಭಾಗವಹಿಸುವವರು ತಲ್ಲೀನಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿರುವಂತೆ,
ಕಥೆಗಳನ್ನು ವಿನಿಮಯ ಮಾಡಿಕೊಂಡು ಮತ್ತು ಪರಸ್ಪರ ಪರಂಪರೆಯನ್ನು ಆಚರಿಸಿ ಕಾರ್ಯಕ್ರಮವು ಸಂಸ್ಕೃತಿಗಳ ಸ್ವರಮೇಳವನ್ನು ಬೆಳೆಸಬೇಕು ಸ್ವಾಮಿ ವಿವೇಕಾನಂದರ ಚಿಂತನೆ, ರಮಾನಂದರ ಅಲೋಚನೆ ಮೀರಾಬಾಯಿಯ ಹುಡುಕಾಟ, ಕಬೀರ್ ದಾಸರ, ಪುರಂದರ, ಕನಕರ ಜಾಗತಿಕ ಸಾಮರಸ್ಯದ ಪ್ರತಿಯೊಂದು ಹಂತವು ಸಂವಹನದ ಮೂಲಕ ಪರಸ್ಪರ ಗೌರವ ಮತ್ತು ಮೆಚ್ಚುಗೆಯ ಗಡಿಗಳು ಮತ್ತು ಭಾಷೆಗಳನ್ನು ಮೀರಿದ ಆಜೀವ ಸಂಪರ್ಕಗಳನ್ನು ಪ್ರೇರೇಪಿಸುತ್ತದೆ.ಈ ವಿನಿಮಯದ ಮೂಲಕ, ವ್ಯಕ್ತಿಗಳು ಸಹಾನುಭೂತಿಯ ಸಾಮೂಹಿಕ ಗುರುತಿನ ಸುಂದರವಾದ ಬಟ್ಟೆಯನ್ನು ನೇಯ್ಗೆ ಮಾಡುವ ಎಳೆಗಳು ಎಂಬ ಸಂದೇಶವನ್ನು ಹರಡುತ್ತವೆ ಎಂದು ತಿಳಿಸಿದರು.
ರಾಜ್ಯ ನಿರ್ದೇಶಕರಾದ ಅಶೋಕ್ ಕುಮಾರ್ ದಾಶ್ ಮಾತನಾಡಿ, ಈ ಕಾರ್ಯಕ್ರಮ ಗಡಿ, ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳ ವಿನಿಮಯ ಯುವ ಜನರ ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯತೆ ಬೆಳೆಯುವ ಹಂತ ಇದು ಎಂದು ತಿಳಿಸಿದರು. ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಂಗಳೂರು ನಗರ ಜಿಲ್ಲೆ ಜಿಲ್ಲಾ ಸಮನ್ವಯ ಅಧಿಕಾರಿ ನಾಗಲಕ್ಷ್ಮೀ, ಶ್ರೀ ಮತಿ ನಂದಾಬಾಯಿ.ಪಿ.ಎಸ್.ವಕೀಲರಾದ ಯೇಜಸ್ ಪಾಷ, ತರಬೇತುದಾರರಾದ ಪ್ರಶಾಂತ್, ಬುದ್ದ ಬಸವ ಕುವೆಂಪು ಯವ ಸಂಘದ ಅಧ್ಯಕ್ಷರಾದ ಪ್ರವೀಣ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.