`ಯತ್ರ ನಾರ್ಯಸ್ತು ಪೂಜ್ಯಂತ ತತ್ರ ರಮಂತ ದೇವತಾ’ ಎಲ್ಲಿ ನಾರಿಯರನ್ನು ಪೂಜಿಸಲಾಗುವುದೊ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ, ಎಂಬ ನಮ್ಮ ಪರಂಪರೆಯನ್ನು ಆದರಿಸಿ,
ಇದೇ ಶೀರ್ಷಿಕೆಯಲ್ಲಿ `ಯತ್ರ ನಾರ್ಯಸ್ತು ಪೂಜ್ಯಂತೆ’ ಎಂಬ ಕನ್ನಡ ಚಲನಚಿತ್ರವನ್ನು `ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ(ರಿ)’ ಓಈಆಅ ಬೆಂಗಳೂರು,
ಇವರ ಸಹಯೋಗದೊಂದಿಗೆ ಈ ಸಂಸ್ಥೆಯ ವ್ಯವಸ್ಥಾಪಕಿ ಆದಂತಹ ಕುಮಾರಿ ಸಹನ ಎಸ್. ರವರು ಎಸ್.ಆರ್. ಸಿನಿಮಾಸ್ ಬ್ಯಾನರ್ನ ಅಡಿಯಲ್ಲಿ ನಿರ್ಮಿಸಿದ್ದಾರೆ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ `U’ ಪ್ರಮಾಣ ಪತ್ರವನ್ನು ನೀಡಿರುತ್ತಾರೆ ಹಾವು ಕಡಿತದಿಂದ ಸತ್ತ ಒಬ್ಬ ಯುವತಿಯನ್ನು ಆಕೆಯ ಸ್ನೇಹಿತೆ ಇದು ಸಹಜ ಸಾವಲ್ಲ ಒಂದು ವ್ಯವಸ್ಥಿತ ಕೊಲೆ,
ನನ್ನ ಸ್ನೇಹಿತೆಯನ್ನು ಪ್ರೀತಿಸುವಂತೆ ನಟಿಸಿ ತನ್ನ ಅಗತ್ಯಗಳನ್ನು ಪೂರೈಸಿಕೊಂಡ ಅವಳ ಪ್ರಿಯಕರನ ಸಂಚು ಇದು ಎಂದು ದೃಡಪಡಿಸಿ ನ್ಯಾಯಾಲಯದಲ್ಲಿ ಹೋರಾಡಿ ಮಹಿಳೆಯರಿಗೆ ನ್ಯಾಯ ಕೊಡಿಸುವ ಕಥಾ ಹಂದರದ ಮಹಿಳಾ ಪ್ರಧಾನ ಚಿತ್ರವೆ ಈ ನಾರ್ಯಸ್ತು ಪೂಜ್ಯಂತೆ” ಕಥೆ-ಚಿತ್ರಕಥೆ-ಸಂಭಾಷಣೆಯನ್ನು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಜೆ.ಎಂ.ಪ್ರಹ್ಲಾದ್ ಬರೆದಿದ್ದಾರೆ. ಕುಮಾರ್ ಸ್ಕಂದ ನಿರ್ದೇಶನದ ಈ ಚಿತ್ರಕಥೆ ಮಾರ್ಚ್ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ ನಿರ್ಮಾಪಕಿ ಸಹನ.ಎಸ್ ರವರು.