ಯಲಹಂಕ: ವಿಧಾನಸಭಾ ಕ್ಷೇತ್ರದ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ(ರಿ)ವು ಯಲಹಂಕ ಉಪನಗರ 5ನೇ ಹಂತದಲ್ಲಿರುವ ಶ್ರೀಶ್ರೀಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ದಿನಾಂಕ 22-9-24 ಭಾನುವಾರದಂದು 2ನೇ ವರ್ಷದ ವಿಶ್ವಕರ್ಮ ಮಹೋತ್ಸವ ಸಮಾರಂಭವನ್ನು ಆಯೋಜಿಸಿದ್ದು, ವಿಜೃಂಭಣೆಯಿಂದ ಜರುಗಿದೆ.
ಪಾಪಗ್ನಿ ಮಠದ ಶ್ರೀಶ್ರೀ ಶ್ರೀ ಕಾಳಿತನಯ ಡಾ. ಉಮಾಮಹೇಶ್ವರ ಸ್ವಾಮೀಜಿ ಹಾಗೂ ವೇದಬ್ರಹ್ಮ ಶ್ರೀ ಆಚಾರ್ಯ ಟಿ ಮೋಹನ್ ರಾವ್ ಶರ್ಮಾ ಅವರ ದಿವ್ಯ ಸನ್ನಿಧಾನದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ವಿಶ್ವನಾಥ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸಂಘದ ಪದಾಧಿಕಾರಿಗಳು ನೀಡಿದ ಮನವಿಯನ್ನು ಪುರಸ್ಕರಿಸಿ ವೀರಬ್ರಹ್ಮೇಂದ್ರ ಸ್ವಾಮಿಗಳ ಹಾಗೂ ಕಾಳಿಕಾಂಬೆ ದೇವಿಯ ದೇಗುಲ ನಿರ್ಮಿಸಲು ಸ್ಥಳ ಕಲ್ಪಿಸುವುದಾಗಿ ಭರವಸೆ ನೀಡಿ ನೆರೆದ ವಿಶ್ವಕರ್ಮ ಜನರ ಮೆಚ್ಚುಗೆಗೆ ಪಾತ್ರರಾದರು.
ಮುಖ್ಯ ಅತಿಥಿಗಳಾಗಿ ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷರುಗಳಾದ ಆರ್. ಶ್ರೀನಿವಾಸಾಚಾರ್, ಬಾಬು ಪತ್ತಾರ್ ,ರಾಜ್ಯ ವಿಶ್ವಕರ್ಮ ಮಹಾಮಂಡಲದ ರಾಜ್ಯಾಧ್ಯಕ್ಷರಾದ ಎಲ್. ನಾಗರಾಜಚಾರ್, ವೆಂಕಟೇಶ್,ಶ್ರೀನಿವಾಸಚಾರ್ ಹಾಗೂ ಕೆಪಿಸಿಸಿ ಓಬಿಸಿ ರಾಜ್ಯ ಉಪಾಧ್ಯಕ್ಷರಾದ ಕೆ.ಎಂ ಮಂಜುನಾಥ್ ಅವರುಗಳು ವೇದಿಕೆ ಅಲಂಕರಿಸಿದ್ದು, ಸಂಘದ ಅಧ್ಯಕ್ಷರಾದ ಎಂ ರಾಮಚಂದ್ರ ಚಾರಿ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿ ಪತ್ರಿಕೆಯ ವಿಶೇಷ ಭಾತ್ಮೀದಾರರಾದ ವಿಜಯಕುಮಾರ್ ಪತ್ತಾರ್ ಸೇರಿದಂತೆ ಅನೇಕ ಗಣ್ಯರುಗಳು ಅತಿಥಿಗಳಾಗಿ ಹಾಗೂ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.ಸಮಾಜದ ಸಾಧಕರಾದ ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀಮತಿ ಸತ್ಯವತಿ, ಮಾರಸಂದ್ರದ ಪಿ.ಬ್ರಹ್ಮಯ್ಯ, ಸಮಾಜದ ಹಿರಿಯ ಮುಖಂಡರಾದ ಮರಿಬಸವಚಾರ್, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹೊನ್ನಪ್ಪಚಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಲ್ಪಿ ಮಂಜುನಾಥಚಾರ್, ಬೆಸ್ಕಾಂ ಎ-ದರ್ಜೆ ಗುತ್ತಿಗೆದಾರರಾದ ಕೋಮಲೇಶಾಚಾರ್, ಕೋಣಲೆ ಡಾ.ಸುಬ್ರಮಣ್ಯ ಭಾರತಿ, ಹಾಗೂ ಮಾರಸಂದ್ರದ ಶಿಲ್ಪಿ ಮುದ್ದು ಕುಮಾರ್ ಅವರುಗಳನ್ನು ವೇದಿಕೆ ಗಣ್ಯರನ್ನು ಸಂಘದ ಪದಾದಿಕಾರಿಗಳು ಸನ್ಮಾನಿಸಿದರು. ಪ್ರತಿಭೆ ಪ್ರದರ್ಶಿಸಿದ ಸಮಾಜದ ಮಕ್ಕಳಿಗೆ, ಪಿಯುಸಿಯಲ್ಲಿ 96% ಅಂಕ ಪಡೆದ ಅಭಯ್ ವಿಧ್ಯಾರ್ಥಿ ಯನ್ನು ಗೌರವಿಸಲಾಯಿತು.
ಈ ಸುಂದರ ಸಮಾರಂಭಕ್ಕೆ ಸಮಸ್ತ ಕುಲಬಾಂಧವರನ್ನು ಸ್ನೇಹಿತರು, ಅಭಿಮಾನಿಗಳು ಆಗಮಿಸಿ ಸಮಾರಂಭವನ್ನು ಯಶಸ್ವಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಜರಿದ್ದರು. ವೀರಾಚಾರ್ ಅಕ್ಕಸಾಲಿ ಮತ್ತು ಬೃಂದಾ ವೀರೇಶ್ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.