ದೇವನಹಳ್ಳಿ: ತಾಲೂಕು ಯಲಿಯೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಗೂ ಬಿಜೆಪಿಯ ಮೈತ್ರಿ ನಡುವೆ ಜಿದ್ದಾ- ಜಿದ್ದಿನಲ್ಲಿ ನಡೆದ ಚುನಾವಣೆ ನಡೆಯಿತು.
ಸೊಸೈಟಿ ಚುನಾವಣೆ ಮುನ್ನ ಅವಿರೋಧ ಆಯ್ಕೆಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಮೈತ್ರಿಯ ಪರಸ್ಪರ ಮಾತುಕತೆ ಯಂತೆ ಕಾಂಗ್ರೆಸ್ಗೆ ನಾಲ್ಕು ಸೀಟುಗಳು ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷಕ್ಕೆ ಎಂಟು ಸೀಟುಗಳಂತೆ ಒಪ್ಪಂದಕ್ಕೆ ಸಹಕರಿಸಿದ ಹಿನ್ನೆಲೆ ಯಲ್ಲಿ ಚುನಾವಣೆ ನಡೆದಿದ್ದು ನಾನಾ ರೀತಿಯ ಕಸರ ತ್ತುಗಳು ಕಾಂಗ್ರೆಸ್ ನವರ ಕೈ ಹಿಡಿಯದೆ ಜೆಡಿಎಸ್ ನವರ ವಿಶ್ವಾಸಕ್ಕೆ ಮಣಿದು ಸೊಸೈಟಿಯ 12 ಸ್ಥಾನಗಳಿಗೂ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಯಲಿಯೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರಾದ ಆಂಜಿನಪ್ಪ, ಪ್ರಭಾಕರ್, ಭಾಗ್ಯಮ್ಮ, ಮುತ್ತಪ್ಪ, ಶ್ರೀನಿವಾಸ್ ಗೌಡ, ಮುನೇಗೌಡ, ಲಕ್ಷ್ಮಮ್ಮ, ನಾರಾಯಣಸ್ವಾಮಿ, ಆನಂದ್, ತಿಮ್ಮರಾಯಪ್ಪ, ಚಂದ್ರಶೇಖರ್, ಮುನಿ ತಿಮ್ಮರಾಯಪ್ಪ , ಮಂಜೇಶ್ ಆಯ್ಕೆಯಾಗಿರುತ್ತಾರೆಂದು ಚುನಾವಣಾ ಅಧಿಕಾರಿ ಚೇತನ ಅಧಿಕೃತವಾಗಿ ಪ್ರಕಟಿಸಿರುತ್ತಾರೆ.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹನು ಮಯ್ಯ, ಯಲಿಯೂರು ಪಂಚಾಯಿತಿ ಅಧ್ಯಕ್ಷ ಅಂಜಿನಮ್ಮ, ಸದಸ್ಯರಾದ ಪವಿತ್ರ ಸೋಮಶೇಖರ್ ನೇತ್ರಾವತಿ ಮಂಜು ನಾಥ್, ರೂಪ ಚಿಕ್ಕಣ್ಣ, ಜೆಡಿಎಸ್ ಮುಖಂಡರಾದ ಶಿವ ಕುಮಾರ್, ಮಟ್ಟಬರಲು ಪ್ರಕಾಶ್, ಹರೀಶ್, ಭರತ್, ವಕೀಲರಾದ ಹನುಮಗೌಡ, ಅಗ್ರಹಾರ ಮಂಜುನಾಥ್ ತೆಲ್ಲಹಳ್ಳಿ ಶ್ರೀನಿವಾಸ ಮೂರ್ತಿ, ಬೊಮ್ನಹಳ್ಳಿ ನಾರಾಯಣ ಸ್ವಾಮಿ, ದೊಡ್ಡಣ್ಣ ನಾರಾಯಣ ಸ್ವಾಮಿ, ಮೂರ್ತಿ, ಅಂಜಿ ನಪ್ಪ, ಭರತ್, ಪ್ರಕಾಶ್ ಸೇರಿದಂತೆ ಸಂಘದ ಶೇರು ದಾರರು ಹಾಜರಿದ್ದರು.