ಬೆಂಗಳೂರು: 13 ಡಿಸೆಂಬರ್ 2024 ರಿಂದ 17 ಡಿಸೆಂಬರ್ 2024ರವರೆಗೆ ಐದು ದಿನಗಳ ಕಾಲ ಯಶವಂತಪುರದ ದಾರಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಮಹೋತ್ಸವ ನಡೆಯಲಿದೆ.
ಪ್ರತಿ ದಿನವೂ ದೇವರಿಗೆ ಅಭಿಷೇಕ, ವಿಶೇಷ ನವನೀತ ಅಲಂಕಾರ, ವಿಶೇಷ ಪೂಜಾಧಿಗಳ ಕಾರಣಿಕೆ, ಹೂವಿನ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ವಿಶೇಷವಾಗಿ ಪ್ರತಿ ದಿನ ಪಂಚಾಮೃತ ಅಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ದೀಪೋತ್ಸವ, ವಾಯುಸ್ತುತಿಪೂರ್ವಕ ಮಧು ಅಭಿಷೇಕ, ವಾಯುಸ್ತುತಿ ಪುನಶ್ಚರಣ, ಪವಮಾನ ಹೋಮ ಪೂಜಾ ಕೈಂಕರ್ಯಗಳು ನಡೆಯಲಿದೆ.
ಡಿಸೆಂಬರ್ 17 ರಂದು ಸಂಜೆ ಯಶವಂತಪುರ ಪ್ರಮುಖ ಬೀದಿಗಳ ಆಂಜನೇಯದೇವರ ರಥಯಾತ್ರೆ ನಡೆಯಲಿದೆ, ರಥಯಾತ್ರೆಯಲ್ಲಿ ವಿಶ್ವಹಿಂದು ಪರಿಷತ್, ಭಜರಂಗದಳ, ಹನುಮಸೇನೆ ಸಂಘಟನೆಗಳು ರಥಯಾತ್ರೆಗೆ ಕೈಜೋಡಿಸಿವೆ ಎಂದು ಟ್ರಸ್ಟ್ ನ ಧರ್ಮದರ್ಶಿ ಡಾ.ಅಂಬರೀಷ್ ತಿಳಿಸಿದ್ದಾರೆ. ಪ್ರತಿದಿನ ಸಂಜೆ ಭಕ್ತಿಗೀತೆ, ಶಾಸ್ತ್ರೀಯ ಸಂಗೀತ ಗಾಯನ, ನೃತ್ಯ, ಭಜನೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.