ಬೆಂಗಳೂರು: ಬೆಂಗಳೂರು ದಕ್ಷಿಣದಲ್ಲಿರುವ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಪೋರಂನಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ಬ್ರಿಲಾಂಟೆ ಪಿಯಾನೋ ಫೆಸ್ಟಿವಲ್ ನೂರಾರು ಜಾಗತಿಕ ಮಟ್ಟದ ಕಲಾವಿದರ ಒಟ್ಟುಗೂಡುವಿಕೆ ಮತ್ತು ಸಾವಿರಾರು ಸಂಗೀತ ಪ್ರೇಮಿಗಳ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ಮುಕ್ತಾಯ ಗೊಂಡಿದೆ.
ಬ್ರಿಲಾಂಟೆ ಪಿಯಾನೋ ಫೆಸ್ಟಿವಲ್ ನ 5ನೇ ಆವೃತ್ತಿಯನ್ನು ಕೊಡೈಕೆನಾಲ್ ಇಂಟರ್ ನ್ಯಾಷನಲ್ ಸ್ಕೂಲ್ ಅದ್ದೂರಿಯಾಗಿ ಪ್ರಸ್ತುತಪಡಿಸಿತು. 18 ದೇಶಗಳ ಮತ್ತು 16 ರಾಜ್ಯಗಳ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ. ವಿಶೇಷವಾಗಿ ಲಿಡಿಯನ್ ನಾದಸ್ವರಮ್, ಮನೋಜ್ ಜಾರ್ಜ್, ರಾಧಾ ಥಾಮಸ್, ಪ್ರೊ .ಮಾರೂವಾನ್ ಬನಾಬ್ದಲ್ಲಾ, ಡಾ. ಆಡಮ್ ಜೆ. ಗ್ರೆಗ್, ಅಮನ್ ಮಹಾಜನ್, ಅಮೃತವಾಶಿನಿ, ಕೆಐಎಸ್ ಕಾಯಿರ್, ನಾಲಾಯಕ್, ಸುನೆಪ್ಸಾಂಗ್ಲಾ, ಜೆಂಟಿಜಂಗ್ ತ್ರಿಶನಾ ಐಯರ್, ಅನಿವೋ ಕುವೋಟ್ಸು, ನೌನೆ ಕುವೋಟ್, ನೌನೆ ನಾಗಿ, ನೌನೆ ನಾಗಿ ಹೋಪ್ ಅಕಾಡೆಮಿ ದಿಮಾಪುರ್, ಉಲಿಕ್ರೇ ಫೋಕ್ ಗ್ರೂಪ್ ಕಾರ್ಯಕ್ರಮಗಳು ಗಮನ ಸೆಳೆಯಿತು. ವಿಶೇಷ ಚೇತನ ಸಂಗೀತಗಾರರು ನೀಡಿದ ಸಂಗೀತ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಕುರಿತು ಬ್ರಿಲಾಂಟೆ ಪಿಯಾನೋ ಉತ್ಸವದ ಸಂಸ್ಥಾಪಕ ಮತ್ತು ನಿರ್ದೇಶಕರಾದ ಕ್ಯೊಚಾನೋ ಟಿಸಿಕೆ, “ಸಂಗೀತದ ಮೂಲಕ ಜನರನ್ನು ಒಟ್ಟುಗೂಡಿಸಬಹುದು ಎನ್ನುವುದಕ್ಕೆ ಬ್ರಿಲಾಂಟೆ ಮತ್ತೊಮ್ಮೆ ಸಾಕ್ಷಿಯಾಗಿದೆ” ಎಂದರು. ಕಾರ್ಯಕ್ರಮ ಉದ್ಘಾಟಿಸಿದ್ದ ಸಮಾಜಸೇವಕಿ ರೇವತಿ ಕಾಮತ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆಚ್ಚುಗೆ ಸಲ್ಲಿಸಿದರು. ಇದೇ ವೇಳೆ ಯುವ ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸಲು ಸಂಗೀತ ಸ್ಪರ್ಧೆ ನಡೆದಿದ್ದು, ಮಂತ್ರ ಉಪಾಧ್ಯಾಯ, ಐಸಾಕ್ ವಾಟ್ಸ್, ಹೃಷೀಕ್ ಗಣೇಶ್, ಇಶಾನ್ ಕೃಷ್ಣ ಆನಂದ್, ಅಕ್ಷದಾ ಕೃಷ್ಣನ್, ಆರವ್ ಲಾಡ್, ಲೀನೆ ಬೆಸ್ಟರ್ವಿಚ್, ಸೃಂಜಯ್ ದಾಸ್, ವೈಷ್ಣವಿ ದೋಂತಿ ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಗಳಿಸಿದರು.