ಬೆಂಗಳೂರು: ಇತ್ತೀಚೆಗೆ ಹೊಸ ವರ್ಷ ಆಚರಣೆ ಸಮಯ ಮತ್ತು ಸಂಭ್ರಮದಲ್ಲಿ ಬಿಬಿಎಂಪಿ ಮತ್ತು ಸಾರ್ವಜನಿಕರು ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಸಹಾಯದಿಂದ ಸಾರ್ವಜನಿಕರು ಯಾವುದೇ ತರಹ ಗಲಾಟೆಗಳನ್ನು ಮಾಡಲು ಭಯ ಬಿದ್ದ ಕಾರಣ ಹೊಸ ವರ್ಷಾಚರಣೆಯನ್ನು ಮುಗಿಸಿದೆವು ಎಂದು ಸಿಎಆರ್ ದಕ್ಷಿಣ ಕವಾಯಿತು ಪೆರೇಡ್ ಮೈದಾನದಲ್ಲಿ ನಗರ ಪೆÇಲೀಸ್ ಆಯುಕ್ತ ದಯಾನಂದ್ ರವರು ತಮ್ಮ ಮಾಸಿಕ ಕವಾಯಿತಿನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೃಹತ್ ಬೆಂಗಳೂರಿನಲ್ಲಿ ಎರಡುವರೆ ಲಕ್ಷ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಇನ್ನೂ ಒಂದುವರೆ ಲಕ್ಷ ಸಿಸಿ ಕ್ಯಾಮರಗಳನ್ನು ನಗರದ ಎಲ್ಲಾ ರಸ್ತೆಗಳಲ್ಲಿ ಅಳವಡಿಸಲು ಬಿಬಿಎಂಪಿಗೆ ಕೊರಲಾಗಿದೆ ಎಂದು ತಿಳಿಸಿದರು.2023- 24 ರಲ್ಲಿ ಯಾವುದೇ ಆಹಿತಕರ ಘಟನೆ ಬೆಂಗಳೂರು ನಗರದಲ್ಲಿ ನಡೆಯಲಿಲ್ಲ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳು ನಷ್ಟವಾಗಲಿಲ್ಲ, ಹಾಗೂ ನಮ್ಮ ಸಿಬ್ಬಂದಿಗಳು ಸಾರ್ವಜನಿಕರು ಕಳೆದುಕೊಂಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಮತ್ತು ಸಾರ್ವಜನಿಕರಿಗೆ ಹಿಂತಿರುಗಿಸಿದ್ದು ಸಹ ಸಂತೋಷವಾಗಿದೆ ಎಂದು ತಿಳಿಸಿದರು.
ಸಾಧ್ಯವಾದಷ್ಟು ಡ್ರಗ್ಸ್ ಹವಳಿಯನ್ನು ತಡೆಯಲಾಗಿದೆ ಮತ್ತು ಸುಮಾರು ಕೋಟ್ಯಂತರ ರೂಪಾಯಿಗಳಷ್ಟು ವಶಪಡಿಸಿಕೊಂಡು ವಿದೇಶಿ ಪ್ರಜೆಗಳನ್ನು ಸೇರಿದಂತೆ ಇತರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.ಪೊಲೀಸ್ ಠಾಣಾ ಮಟ್ಟದಲ್ಲಿ ಸಿಬ್ಬಂದಿಗಳಿಗೆ ರಜೆ ನೀಡುವುದು ಮತ್ತು ಅವರ ಕುಂದು ಕೊರತೆಗಳನ್ನು ಸಹ ಡಿಸಿಪಿ ಮಟ್ಟದ ಅಧಿಕಾರಿಗಳು ಪರಿಶೀಲಿಸಬೇಕೆಂದು ಆದೇಶಿಸಿದರು.
ಉತ್ತಮ ಕೆಲಸದಲ್ಲಿ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಾಂಸನಾ ಪತ್ರಗಳನ್ನು ವಿತರಿಸಿದ್ರು.ಮುಂಬರುವ ವೈಮಾನಿಕ ಪ್ರದರ್ಶನಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಜ್ಕೊಳ್ಳಬೇಕೆಂದು ಆದೇಶಿಸಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಉಪಸ್ಥಿತರಿದ್ದರು.