ಓದು ನಾಟಕ , ಸಂಗೀತ ಕ್ರೀಡೆ ಅಂತಹ ಅಭಿರುಚಿ ಹವ್ಯಾಸಗಳು ಬಾಲ್ಯದಿಂದಲೇ ಮಕ್ಕಳಿಗೆ ಪರಿಚಯವಾದರೆ ಅವರ ಆಲೋಚನ ಕ್ರಮ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಫೋತ್ತಮ ಬಿಳಿಮಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರಿಂದು ಮನುಜ ರಂಗ ಟ್ರಸ್ಟ್ ( ರಿ ) ಹಾಗೂ ಸುಖಾಂಕ್ಷ ರಂಗ ಮಡಿಲು ( ರಿ ) ಸಂಯುಕ್ತಾಶ್ರಯದಲ್ಲಿ ಇಂದು ಬೆಂಗಳೂರಿನ ಮೈಸೂರು ರಸ್ತೆಯ ದುಬಾಸಿಪಾಳ್ಯದ ಕಂಗಕರ್ಮಿ ಮಾಲತೇಶ ಬಡಿಗೇರ ಅವರ ರಂಗಸೌಧದಲ್ಲಿ ಆಯೋಜಿಸಿದ್ದ ಸುಖಾಂಕ್ಷ ಚಾರಿಟಬಲ್ ಟ್ರಸ್ಟ್ ( ರಿ ) ಆಶ್ರಮವಾಸಿ ಮಕ್ಕಳು ಅಭಿನಯಿಸಿದ, ರಂಗಕರ್ಮಿ ರೇಣುಕ ಎಸ್ , ಎನ್ ನಿರ್ದೇಶನದ ” ಯಾರೂ ಆಡಲಿಕ್ಕೆ ಒಲ್ಲರು ” ಎಂಬ ನಾಟಕ ಪ್ರದರ್ಶನದ ಬಳಿಕ ಮಕ್ಕಳೊಂದಿಗೆ ನೀತಿ ಕತೆಯ ಮುಖೇನ ಸಂವಾದಿಸಿ ಮಾತನಾಡಿದರು.
ಮಕ್ಕಳ ರಂಗ ಭೂಮಿ ನಿಜಕ್ಕೂ ಈ ಕಾಲಘಟ್ಟದಲ್ಲಿ ತುಂಬ ಅಗತ್ಯವಿದೆ. ಸಾಮೂದಾಯಿಕ ಚಟುವಟಿಕೆಗಳಿಗೆ ನಾವೆಲ್ಲರೂ ಮುಂದಾಗಬೇಕಿದೆ. ಆಟ ಪಾಟದ ಜತೆಗೆ ಬಹು ಜೀವ ವೈವಿದ್ಯಗಳ ಪ್ರಾಣಿ ಪಕ್ಷಿಗಳ ಪರಿಚಯಿಸುವ ಜೀವಜಗತ್ತನ್ನು ಪರಿಚಯಿಸುವ ಹಂದರ ವಿರುವ ನಾಟಕವಿದು ಎಂದು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಲೇಖಕಿ ಎನ್. ಸಂಧ್ಯಾ ರಾಣಿ ತಮ್ಮ ಅಭಿಮತ ತಿಳಿಸಿದರು.
ಮಕ್ಕಳ ಮನಸ್ಸಿನಲ್ಲಿ ನಾಟಕ ದಂತಹ ಚಟುವಟಿಕೆಗಳು ನಡೆಯುವುದರಿಂದ ಮಕ್ಕಳ ಬೌಧ್ದಿಕ ಮತ್ತು ಸಕಾರಾತ್ಮಕವಾಗಿ ಸುಧಾರಿಸಲಿದೆ, ಎಂದು ಡಾ. ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯಿಸಿದರು. ಸಮಾರಂಭವನ್ನು ಶಾರದ ಎಸ್ ನಿರೂಪಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ.ನಾಗರಾಜಮೂರ್ತಿ, ರಂಗಕರ್ಮಿ ಮಾಲತೇಶ ಬಡಿಗೇರ, ಸುಖಾಂಕ್ಷ ಜ್ಞಾನೇಂದ್ರ , ಆಶ್ರಮವಾಸಿ ಮಕ್ಕಳು, ರಂಗಾಸಕ್ತರು ಉಪಸ್ಥಿತರಿದ್ದರು.