ದೇವನಹಳ್ಳಿ:ರಾಜ್ಯ ರಾಜಧಾನಿ ಬೆಂಗಳೂರಿನ ದೇವನಹಳ್ಳಿ ಬಳಿಯ ಸಾದಹಳ್ಳಿ ಗೇಟ್ ಬಳಿಯ ಶ್ರೀ ಕೃಷ್ಣ ಸಾಗರ್ ಹೋಟೆಲ್ ನಲ್ಲಿ ಯುವಕನ ಮೇಲೆ ಭಯಾನಕ ದಾಳಿ ನಡೆದಿದೆ. ದುಷ್ಕರ್ಮಿಗಳ ಗ್ಯಾಂಗ್ ಹಾಡ ಹಗಲೇ ಹೋಟೆಲ್ ಗೆ ನುಗ್ಗಿ ಯುವಕನ ಕೈ ಕತ್ತರಿಸಿ ಅಟ್ಟಹಾಸ ಮೆರೆದಿದೆ.
ಮಂಜುನಾಥ್ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕ. ಏಕಾಏಕಿ ಹೋಟೆಲ್ ಗೆ ನುಗ್ಗಿದ ಗ್ಯಾಂಗ್ ಮಾರಕಾಸ್ತ್ರಗಳಿಂದ ಮಂಜುನಾಥ್ ಮೇಲೆ ದಾಳಿ ನಡೆಸಿದ್ದು, ಒಂದು ಕೈ ಕಟ್ ಆಗಿದೆ. ಕುಸಿದು ಬಿದ್ದ ಮಂಜುನಾಥ್ ಪರಿ ಪರಿಯಾಗಿ ಬೇಡಿಕೊಂಡರೂ ಬಿಡದ ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ನಡೆಸಿದ್ದಾರೆ.ಯುವಕನ ಕಾಲುಗಳಿಗೂ ಗಂಭೀರವಾಗಿ ಗಾಯಗಳಾಗಿವೆ. ಊಟ ಮಾಡಲು ಹೋಟೆಲ್ ಗೆ ಬಂದಿದ್ದ ವ್ಯಕ್ತಿ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಕೃತ್ಯಕ್ಕೆ ಹೋಟೆಲ್ ಸಿಬ್ಬಂದಿ, ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ.
ರಕ್ತದ ಮಡುವಲ್ಲಿ ಬಿದ್ದಿದ್ದ ಮಂಜುನಾಥ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,ಹಳೆ ದ್ವೇಷದ ವೈಷಮ್ಯ ಹಿನ್ನೆಲೆ ಏರ್ಪೋಟ್ ರಸ್ತೆಯಲ್ಲಿ ಅಟ್ಯಾಕ್ ಮಾಡಿದ್ದಾರೆ.ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಸ್ಥಳಕ್ಕೆ ಚಿಕ್ಕಜಾಲ ಪೊಲೀಸರ ಭೇಟಿ ನೀಡಿ ಪರಿಶೀಲನೆ,ಎಲ್ಲರೂ ದೇವನಹಳ್ಳಿಯ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭೋವಿಪಾಳ್ಯದ ನಿವಾಸಿಗಳು,ತಂದೆಯ ಕೊಲೆ ಕೇಸ್ ನಲ್ಲಿ ಸಹಾಯ ಮಾಡ್ಲಿಲ್ಲವೆಂದು ಮಂಜುನಾಥ್ ಮೇಲೆ ದ್ವೇಷ ಬೆಳೆಸಿದ್ದ ಶ್ರೀರಾಮ್ ಇವತ್ತು ಮಂಜುನಾಥ್ ಹಿಂಬಾಲಿಸಿ ಹೋಟೆಲ್ ಗೆ ನುಗ್ಗಿ ಮಚ್ಚು ಬೀಸಿ ಪರಾರಿಯಾಗಿದ್ದಾರೆ.