ಮಂಗಳೂರು: ಈಜುಕೊಳದಲ್ಲಿ ಮೂವರು ಯುವತಿಯರು ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಪಟ್ಟಂತೆ ಘಟನೆ ಸಂಭವಿಸಿದ ರೆಸಾರ್ಟ್ ಬಂದ್ ಮಾಡಲಾಗಿದೆ.
ನಿನ್ನೆಯೇ ಪ್ರಕರಣ ಸಂಬಂಧ ರೆಸಾರ್ಟ್ನ ಮಾಲೀಕ ಹಾಗೂ ವ್ಯವಸ್ಥಾಪಕರನ್ನು ಬಂಧನಕ್ಕೊಳಪಡಿಸಲಾಗಿತ್ತು. ಇದೀಗ ತನಿಖೆ ಮುಗೆಯುವರೆಗೂ ರೆಸಾರ್ಟ್ನ ಪರವಾನಿಗೆಯನ್ನು ಉಲ್ಲಾಳ ಪುರಸಭೆ ವತಿಯಿಂದ ಅಮಾನತುಗೊಳಿಸಿದ್ದು, ಪೊಲೀಸರು ರೆಸಾರ್ಟ್ಗೆ ಬೀಗ ಮುದ್ರೆ ಹಾಕಿದ್ದಾರೆ.