ಬೆಂಗಳೂರು: 18 ವರ್ಷದ ಯುವತಿ ಕುತ್ತಿಗೆಗೆ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಜರುಗಿದೆ.
ಜೆಸಿ ನಗರದ 19ನೇ ಮುಖ್ಯರಸ್ತೆಯಲ್ಲಿ ವಾಸವಿರುವ ಐಶ್ವರ್ಯ(18) ಎಂಬ ಯುವತಿ ನೇಣಿಗೆ ಶರಣಾಗಿರುತ್ತಾಳೆ.ಈಕೆ ಹಾಗೂ ಇವರ ಪೋಷಕರು ನಾಲ್ಕು ವರ್ಷಗಳಿಂದ ಈ ವಿಳಾಸದಲ್ಲಿ ವಾಸವಿದ್ದು ಎಲ್ಲರೂ ಗಾರೆ ಕೆಲಸ ಮಾಡಿಕೊಂಡಿರುತ್ತಾರೆ ಎಂದು ಮಹಾಲಕ್ಷ್ಮಿ ಲೇಔಟ್ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುತ್ತಾರೆ.