ಹೊಸದಿಲ್ಲಿ: ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ಇತಿಹಾಸ ಕಂಡ ಅಪರೂಪದ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಹಠ, ಬದ್ಧತೆ, ಶಿಸ್ತು ಅಂದರೆ ಏನೆಂದು ಒಂದು ಪೀಳಿಗೆಗೆ ಕಲಿಸಿದ ಮಹಾನ್ ಆಟಗಾರನಾತ. ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ತಂಡದ ಪ್ರಮುಖ ಸದಸ್ಯ ಈ ಯುವರಾಜ್ ಸಿಂಗ್. ಕ್ಯಾನ್ಸರ್ ಗೆದ್ದು ಮರಳಿ ಮೈದಾನಕ್ಕಿಳಿದು ತನ್ನ ಅಸ್ತಿತ್ವವನ್ನು ಸಾರಿದ ಹಠಮಾರಿ ಈ ಯುವರಾಜ್ ಸಿಂಗ್. ಕ್ರಿಕೆಟ್ ಮೇಲಿನ ತನ್ನ ಪ್ರೀತಿ, ಬದ್ಧತೆಯನ್ನು ಸಾಬೀತುಮಾಡಿದ ಶಿಸ್ತುಗಾರ ಕೂಡ ಹೌದು.
ಆದರೆ ಇದೀಗ ಯುವರಾಜ್ ಸಿಂಗ್ ಕುರಿತು ಮತ್ತೋರ್ವ ಮಾಜಿ ಆಟಗಾರ ರಾಬಿನ್ ಉತ್ತಪ್ಪ ನೀಡಿರುವ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದೆ. “ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವಲ್ಲಿ ವಿರಾಟ್ ಕೊಹ್ಲಿ ಅವರ ಪಾತ್ರವೂ ಇದೆ..” ಎಂದು ರಾಬಿನ್ ಉತ್ತಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.