ನಗರದ ಪ್ರತಿಷ್ಠಿತ ಸುಗಮ ಸಂಗೀತ ಸಂಸ್ಥೆಗಳಲ್ಲಿ ಒಂದಾದ ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ಮಲ್ಲೇಶ್ವರದ 5 ನೇ ಅಡ್ಡ ರಸ್ತೆಯಲ್ಲಿರುವ ಲೀಲಾದ್ರಿ ಸಭಾಂಗಣದಲ್ಲಿ ಅಕಾಡೆಮಿಯ ರಜತ ಸಂಭ್ರಮ ಹಾಗು ವೇದ ಬ್ರಹ್ಮ ಶ್ರೀ ಅನಂತರಾಮಶರ್ಮ ರವರ ಶತಮಾನೋತ್ಸವದ ನೆನಪಿನಲ್ಲಿ ಆಯೋಜಿಸಿದ್ದ ಭಕ್ತಿ ಕುಸುಮಾಂಜಲಿ ಗೀತಗಾಯನ ಕಾರ್ಯಕ್ರಮವು ಕಲಾಸಕ್ತರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಹೆಸರಾಂತ ಪೋಷಕ ನಟ ಹಾಗೂ ಹಿರಿಯ ಗಾಯಕ ಶಶಿಧರ್ ಕೋಟೆ ಮಾತನಾಡಿ ಕಳೆದ 25 ವರ್ಷಗಳಿಂದ ಅಕಾಡೆಮಿಯು ಹಲವಾರು ವಿಭಿನ್ನ ಹಾಗು ವಿಶೇಷ ಕಾರ್ಯಕ್ರಮಗಳ ಮೂಲಕ ಕಲಾ ಸೇವೆ ಮಾಡುತ್ತಿದ್ದ ಸಂಸ್ಥೆ ಯೊಂದಿಗಿನ ಒಡನಾಟವನ್ನು ಸ್ಮರಿಸಿ ರಜತ ಸಂಭ್ರಮ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಮುಖ್ಯ ಅಥಿತಿ ಗಳಾಗಿ ಆಗಮಿಸಿದ್ದ ಸಮಾಜ ಸೇವಕರು ಹಾಗು ಕಲಾಪೋಷಕರಾದ ಎಂ. ದಿನೇಶ್ ರಾವ್ ರವರು ಅಕಾಡೆಮಿಯ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವು ದಾಗಿ ಹೇಳಿ ಅಕಾಡೆಮಿಯೊಂದಿಗೆ ಕಳೆದ ಹಲವಾರು ವರ್ಷಗಳಿಂದ ಭಾಗಿಯಾಗಿರುವುದಾಗಿ ಹೇಳಿದರು.
ವೇದಬ್ರಹ್ಮ ಶ್ರೀ ಅನಂತರಾಮ ಶರ್ಮಾ ರವರ ನೆನಪಿನಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಮತ್ತು ವಿದ್ವಾಂಸರಾದ ಕೆ. ಎಸ್. ನಾಗರಾಜ್ ರವರು ಅನಂತರಾಮ ಶರ್ಮಾ ರವರು ಹಲವಾರು ವೇದಕ್ಕೆ ಸಂಬದಿಸಿದ ಪುಸ್ತಕಗಳನ್ನು ಬರೆದಿದ್ದು ಅದರಲ್ಲಿ ಪುಯಮಾನ ಪ್ರಯೋಗ ಸಹ ಇದ್ದು ಅದನ್ನು ಅಕಾಡೆಮಿಯು ಪ್ರಕಾಶನ ಗೊಳಿಸಲು ನಿರ್ಧರಿಸಿರುವುದು ಪುರೋಹಿತ ವರ್ಗಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಅಕಾಡೆಮಿಯು ಧಾರ್ಮಿಕ, ಸಾಂಸ್ಕೃತಿಕ, ಸಮಾಜಸೇವೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಎ. ಎಂ. ಚಂದ್ರಶೇಖರ್, ಕಲಾಪೋಷ ಕರಾದ ವೀಣಾ ಅಶೋಕ್, ಅಕಾಡೆಮಿ ಸಂಸ್ಥಾಪಕಿ ಗಾಯತ್ರಿಕೇಶವ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಶಿಧರ್ ಕೋಟೆ, ವಾಸುದೇವ್, ಅನಂತಭಟ್, ಎಂ. ಕೆ. ಜಯಶ್ರೀ, ಡಾ. ವಿಭಾಶ್ರಿ, ಸಂಧ್ಯಾ ಶ್ರೀ, ಡಾ. ಪ್ರಮಥಾ ದೀಕ್ಷಿತ್, ಡಾ. ಸುರಭಿ ಶ್ರೀಹರಿ, ಮಾಸ್ಟರ್ ಸಮರ್ಥ ಹಾಗು ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು ಗೀತಗಾಯನ ದಲ್ಲಿ ಭಾಗವಹಿಸಿದ್ದರು.
ಎಸ್. ಶಾಮ ದತ್ತ – ಸ್ವಾಗತ, ವಾಸುದೇವ ನಿರೂಪಣೆ, ಕೇಶವಮೂರ್ತಿ – ವಂದನಾರ್ಪಣೆ ಮಾಡಿದರು.ಹರ್ಷ ಶಲವಾಡಿ – ಹಾರ್ಮೋನಿಯಂ, ಮೋಹನ್ – ತಬಲ, ಶಾಮದತ್ತಾ – ವಿಶೇಷ ಲಯವಾದ್ಯದಲ್ಲಿ ಸಹಕರಿಸಿದರು. ಕಾರ್ಯಕ್ರಮಕ್ಕೆ ಮೊದಲು ನಮ್ಮನ್ನು ಅಗಲಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರಿಗೆ ಮೌನನಮನ ಸಲ್ಲಿಸಲಾಯಿತು.