ಹನೂರು: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಭೀಮ್ ಸೇನಾ ಕರ್ನಾಟಕ ರಾಜ್ಯ ಸರ್ಕಾರಿನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಮಾಬಾಯಿ ಅಂಬೇಡ್ಕರ್ ರವರ 127 ನೇ ಜಯಂತೋತ್ಸವ ಕಾರ್ಯ ಕ್ರಮವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ವೇದಿಕೆಯಲ್ಲಿರುವ ಗಣ್ಯರು ರಮಾಬಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.
ಅಂಬೇಡ್ಕರ್ ವಿಚಾರವಾದಿ ಕೇಶವಮೂರ್ತಿ ಮಾತನಾಡಿ ಡಾ ಬಿ ಆರ್ ಅಂಬೇಡ್ಕರ್ ಮತ್ತು ರಮಾಬಾಯಿ ದಂಪತಿಗಳು ಕೂಡ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆ ರವರಷ್ಟೇ ಆದರ್ಶ ದಂಪತಿಗಳು. ರಮಾಬಾಯಿ ಭೀಮರಾವ್ ಅಂಬೇಡ್ಕರ್ 7 ಫೆಬ್ರವರಿ 1898 ರಲ್ಲಿ ಜನಿಸಿದರು.ರಮಾಬಾಯಿ ಭಿಕು ಧೋತ್ರೆ (ವಲಂಗ್ಕರ್) ಮತ್ತು ರುಕ್ಮಿಣಿ ದಂಪತಿಗಳ ಬಡ ಕುಟುಂಬದಲ್ಲಿ ಜನಿಸಿದರು.
ರಮಾಬಾಯಿ ರವರು 1906 ಏಪ್ರಿಲ್ 4 ರಂದು ಮುಂಬೈನ ಬೈಕುಲ್ಲಾದ ತರಕಾರಿಮಾರುಕಟ್ಟೆಯಲ್ಲಿ ನಡೆದ ಅತ್ಯಂತ ಸರಳ ಸಮಾರಂಭದಲ್ಲಿ ಅಂಬೇಡ್ಕರ್ ಅವರನ್ನು ವಿವಾಹವಾದರು. ಆ ಸಮಯದಲ್ಲಿ, ಅಂಬೇಡ್ಕರ್ ಅವರಿಗೆ 15 ವರ್ಷ ಮತ್ತು ರಮಾಬಾಯಿ ಅವರಿಗೆ ಒಂಬತ್ತು ವರ್ಷವಾಗಿತ್ತು.ಡಾ ಬಿ ಆರ್ ಅಂಬೇಡ್ಕರ್ ರವರ ಸಾಧನೆ ಹಿಂದೆ ಮಾತೆ ರಮಾಬಾಯಿರವರ ಸಂಪೂರ್ಣ ಶ್ರಮವಿದೆ ಅಂದರೆ ತಪ್ಪಾಗಲಾರದು. ಜೀವನದಲ್ಲಿ ಎಲ್ಲವನ್ನೂ ತ್ಯಾಗಮಾಡಿ ಸಾಧನೆ ಮಾಡಿದೆ ಮಹಿಳೆ ಅಂದರೆ ರಮಾಬಾಯಿರವರು ಅದಕ್ಕೆ ಇವರನ್ನು ಪ್ರಪಂಚದ ಆದರ್ಶ ಮಹಿಳೆ ಎಂದು ಕರೆಯಲಾಗುತ್ತದೆ.
ಈ ಸಂದರ್ಭದಲ್ಲಿ ಸಿದ್ದರಾಜು, ಮಹೇಶ್, ಪಪಂ ಸದಸ್ಯೆ ಮಂಜುಳ ಸತೀಶ್, ಹೋರಾಟಗಾರ್ತಿ ರುಕ್ಮೀಣಿ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್, ಪ್ರಧಾನಕಾರ್ಯದರ್ಶಿ ಎಸ್ ನಂಜುಂಡಯ್ಯ, ಖಜಾಂಚಿ ಶಿವಕುಮಾರ್, ಸಾವಿತ್ರಿ ಬಾ ಪುಲೆ ಸಂಘದ ಅಧ್ಯಕ್ಷೆ ಸಂಘದ ಸಾವಿತ್ರಿ, ಉಪಾಧ್ಯಕ್ಷೆ ಶಿವಮ್ಮ, ಉಪನ್ಯಾಸಕ ಮಹೇಂದರ್, ಹಾಗೂ ಸಾರ್ವಜನಿಕರು ಹಾಜರಿದ್ದರು.