ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದವನನ್ನು ಕರೆದೊಯ್ದು ಮಾರಣಾಂತಿಕ ಹಲ್ಲೆ ಮಾಡಲಾಗಿದೆ.ಗಾಂಜ ಮತ್ತಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.ಆನೇಕಲ್ ಪಟ್ಟಣಕ್ಕೆ ಸಮೀಪದ ದಿಣ್ಣೆ ಬಳಿ ಘಟನೆ ನಡೆದಿದೆ.ಮುರುಳಿ(28) ಎಂಬ ಶಿಕ್ಷಕನ ಮೇಲೆ ಆರು ಜನ ಪುಂಡರಿಂದ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮುರಳಿ ಮಧ್ಯಾಹ್ನ ಕಾವೇರಿ ಕಾಲೇಜು ಬಳಿ ಹೋಗಿದ್ದ ಈ ಸಂದರ್ಭದಲ್ಲಿ ಎರಡು ಬೈಕ್ ನಲ್ಲಿ ಬಂದಿದ್ದ ಆರು ಜನರ ತಂಡ.
ಮುರಳಿ ಕೆರೆದೊಯ್ದ ನಂತರ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಪೆನ್ ತೆಗೆದುಕೊಂಡು ಕೈ ಹಾಗೂ ಬೆನ್ನಿನ ಭಾಗಕ್ಕೆ ಚುಚ್ಚಲಾಗಿದೆ. ಭೀಕರವಾಗಿ ಹಲ್ಲೆ ನಡೆಸಿ ಮುರಳಿಯ ಮೊಬೈಲ್ನಲ್ಲಿ ಪೋನ್ ಪೇನಲ್ಲಿ ಇದ್ದ ನೂರು ರೂಪಾಯಿಯನ್ನೂ ಬಿಡದೆ ಕಸಿದುಕೊಂಡಿದ್ದಾರೆ. ಬಳಿಕ ಮೊಬೈಲ್ ಬಿಟ್ಟು ಓಡಿ ಹೋಗಿದ್ದಾರೆ.
ಬಳಿಕ ಸ್ನೇಹಿತರಿಗೆ ಮಾಹಿತಿ ತಿಳಿಸಿದ ಮುರಳಿಯನ್ನು ಸ್ನೇಹಿತರು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.