ಗುಂಡ್ಲುಪೇಟೆ: ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಪಾಲನೆ ಮಾಡಿದರೆ, ಅಪಘಾತ ಹಾಗೂ ಇನ್ನಿತರ ಹಾನಿಗಳನ್ನು ತಡೆಗಟ್ಟಲು ಸಾಧ್ಯವಿದೆ ಮೊದಲು ವಿದ್ಯಾರ್ಥಿಗಳು ಜಾಗೃತರಾಗಿ ಎಂದು ಬೇಗೊರು ಸಬ್ ಇನ್ಸ್ಪೆಕ್ಟರ್ ಚರಣ್ ಗೌಡ ಹೇಳಿದರು.ಬೇಗೂರು ಹೋಬಳಿಯ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಡಿಡ್ಲೋಮೋ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು ರಸ್ತೆ ಸುರಕ್ಷತೆ ಬಗ್ಗೆ ಇರುವ ನಿಯಮಗಳನ್ನು ಪಾಲನೆ ಮಾಡಿದರೆ ಬಹಳಷ್ಟು ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಿದೆ. ಅಲ್ಲದೆ, ಎಲ್ಲರೂ ರಸ್ತೆಯ ನಿಯಮಗಳ ಬಗ್ಗೆ ಅರಿವು ಹೊಂದಿ ವಾಹನ ಚಾಲನೆ ಮಾಡಬೇಕು ಎಂದರು.
ವಾಹನ ಚಾಲನೆಗೆ ದಾಖಲಾತಿ ಹೊಂದಿ: ವಾಹನಗಳನ್ನು ಓಡಿಸುವ ಮುನ್ನ ವಾಹನ ಪರವಾನಗಿ,ವಾಹನ ವಿಮೆ, ದಾಖಲಾತಿಗಳನ್ನು ಹೊಂದಿರಬೇಕು. ಅಲ್ಲದೆ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳ ಸಂಚಾರದಿಂದ ಅಪಘಾತಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲನೆ ಮಾಡುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಹಂತದಿಂದಲೇ ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸಿದರೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು ಹಾಗೂ ಹೆಚ್ಚಿನ ಓದಿನ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ನಂತರ ಸಂಪನ್ಮೂಲ ವ್ಯಕ್ತಿ ಕಾಳಿಂಗ ಸ್ವಾಮಿ ಸಿದ್ದಾರ್ಥ್ ರವರು ಮಾತನಾಡಿ ಸಮಾಜವನ್ನು ಪರಿವರ್ತನೆ ಮಾಡಲು ಯುವ ಜನತೆ ಮಹತ್ವಾಕಾಂಕ್ಷೆ, ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಜೀವನದ ಮಹತ್ತರ ಘಟ್ಟವನ್ನು ತಲುಪಲು ಮೊದಲು ನಕಾರಾತ್ಮಕ ಭಾವನೆಯನ್ನು ತೊಲಗಿಸಬೇಕು ಎಂದುಯುವಜನತೆ ಕಾನೂನು ಅಧ್ಯಯನ ಮಾಡಿಕೊಂಡು ಆಡಳಿತಾತ್ಮಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವಂತಾಗಬೇಕು. ಉನ್ನತ ಆಡಳಿತ ಹುದ್ದೆಗಳಲ್ಲಿ ಕರ್ತವ್ಯ ಮಾಡುವುದರ ಮೂಲಕವಾಗಿ ಸದೃಢ ದೇಶ ಕಟ್ಟುವ ಮನಸ್ಸು ವಿದ್ಯಾರ್ಥಿಗಳಲ್ಲಿ ಇರಬೇಕಾಗಿದೆ. ಇದಕ್ಕಾಗಿ ಕನಸು ಕಾಣಬೇಕು. ಎತ್ತರಕ್ಕೆ ಬೆಳೆಯುವ ತುಡಿತ ಹುಟ್ಟಿಕೊಳ್ಳಬೇಕು. ಕನಸು ನನಸು ಮಾಡಿಕೊಳ್ಳುವಲ್ಲಿ ಪೂರಕವಾಗಿ ಸ್ಪಂದಿಸುವ ವಿಷಯಗಳೆಲ್ಲವನ್ನೂ ಅರಿಯುವ ಪ್ರಯತ್ನ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದರು.
ನಿಲಯ ಪಾಲಕರಾದ ರಂಗಸ್ವಾಮಿ ಮಾತನಾಡಿ ಇತ್ತೀಚೆಗೆ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಹಾಗೂ ಮೊಬೈಲ್ಗಳಲ್ಲಿ ಫೇಸ್ಬುಕ್ ಮತ್ತು ವಾಟ್ಸಪ್ ಗಳಿಗೆ ಅಂಟಿಕೊಳ್ಳದೆ ತಮ್ಮ ಅಮೂಲ್ಯವಾದ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಲು ಓದಿನ ಕಡೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ರಾಘವಾಪುರ ಗ್ರಾಮ ಪಂಚಾಯತಿ ಅದ್ಯಕ್ಷರಾದ ಅರ್ ಡಿ ಉಲ್ಲಾಸ್. ವಿದ್ಯಾರ್ಥಿಗಳು ಹಾಜರಿದ್ದರು.