ಬೆಂಗಳೂರು: ನಗರದಲ್ಲಿನ ರಸ್ತೆ ಸುರಕ್ಷತೆಯ ಅರಿವು ಮೂಡಿಸಲು ಈ ಕುರಿತಾದ ಕಾರ್ಯಕ್ರಮ ಹಮ್ಮಿಕೊಳ್ಳಲು ಬೆಂಗಳೂರಿನ ಸಂಚಾರಿ ಪೊಲೀಸ ರೊಂದಿಗೆ ಖ್ಯಾತ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ ಕೈಜೋಡಿಸಿದೆ.
ಈ ಕಾರ್ಯಕ್ರಮದಲ್ಲಿ ಸ್ವಿಗ್ಗಿ ಸುಮಾರು 450 ಫುಡ್ ಡೆಲಿವರಿ ಡೆಲಿವರಿ ಬಾಯ್ಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಸ್ತೆಯಲ್ಲಿ ವಾಹನ ಸಂಚಾರದ ವೇಳೆ ಅಗತ್ಯವಿರುವ ಸುರಕ್ಷತೆ, ಚಾಲನೆ ವೇಳೆ ಜಾಗರೂಕತೆ, ವಾಹನ ಚಾಲನೆ ವೇಳೆ ಸಂಚಾರಿ ನಿಯಮಗಳ ಸೂಕ್ತ ಪಾಲನೆ ಹಾಗೂ ಸಮಯ ಪಾಲನೆ ವೇಳೆ ಡೆಲಿವರಿ ಬಾಯ್ಗಳ ಸುವರ್ತನೆ ಮತ್ತು ಡೆಲಿವರಿ ವೇಳೆ ಸೂಕ್ತ ರಸ್ತೆಗಳ ಆಯ್ಕೆ ಕುರಿತು ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಸಹಾಯಕ ಪೊಲೀಸ್ ಆಯುಕ್ತ, ಎಸ್ಎಚ್ಓ, ಆರ್ಟಿಪಿ ಇನ್ಸ್ಪೆಕ್ಟರ್ಗಳ ನೇತೃತ್ವ ದಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ಅಧಿಕಾರಿಗಳು ಡೆಲಿವರಿ ಬಾಯ್ಗಳಿಗೆ ಉಪಯುಕ್ತ ತರಬೇತಿ ಮತ್ತು ಮಾರ್ಗದರ್ಶನ ಹಾಗೂ ರಸ್ತೆ ಸಂಚಾರದ ವೇಳೆ ಅಗತ್ಯವಾದ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ.
ಜಾಗತಿಕವಾಗಿ ಗಮನಿಸಿ ದರೆ, ಭಾರತದಲ್ಲಿ ರಸ್ತೆ ಅಫಘಾತಗಳ ಸಂಖ್ಯೆ ಗಣನೀಯವಾಗಿ ಏರಿದೆ. ರಸ್ತೆ ಸಂಚಾರದ ವೇಳೆ ಪ್ರತಿ ಸಲ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಉದ್ದೇಶವಾಗಿದೆ. ಈ ವಿಚಾರದಲ್ಲಿ ಮುಂಬೈನ ಸಂಚಾರಿ ಪೊಲೀಸರ ಸಹಕಾರಕ್ಕೆ ಕೃತಜ್ಞತೆಗಳು ಎಂದು ಸ್ವಿಗ್ಗಿಯ ಚಾಲಕರ ಸಂಘಟನೆಯ ಹಿರಿಯ ಉಪಾಧ್ಯಕ್ಷ ಶಲಭ್ ಶ್ರೀವಾಸ್ತವ್ ಮೆಚ್ಚುಗೆ ವ್ಯಕ್ತಪಡಿಸಿದರು.