ಹುಬ್ಬಳ್ಳಿ: ವಕ್ಫ್ ಹಗರಣದ ಸಂಬAಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ ಪ್ರತಿಭಟನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯರ ಅವಧಿಯಲ್ಲೂ ರೈತರ ಜಮೀನಿನ ಸಂಬAಧ ವಕ್ಫ್ಬಗ್ಗೆ ನಮೂದಾಗಿರಲಿಲ್ಲವೇ. ಅವರ ಕಾಲದಲ್ಲೂ ಇಂತಹ ಘಟನೆ ನಡೆದಿದ್ದು. ಈಗ ನಾವು ನೋಟಿಸ್ ಹಿಂಪಡೆಯುವAತೆ ಕ್ರಮ ಕೈಗೊಂಡಿದ್ದೇವೆ.
ಬಸವರಾಜ್ ಬೊಮ್ಮಾಯಿ ಅವರು ಈ ಹಿಂದೆ ಮಾತನಾಡಿದ್ದನ್ನು ಮರೆತಿದ್ದಾರೆ. ರಾಜಕೀಯಕ್ಕಾಗಿ ಏನೆಲ್ಲಾಮಾತನಾಡುತ್ತಿದ್ದಾರೆ. ಅವರಿಗೆ ವಿಷಯಾಧಾರಿತವಾಗಿ ಚರ್ಚೆ ಮಾಡಲು ಏನು ವಿಷಯವಿಲ್ಲ. ವಿನಃಕಾರಣ ರಾಜಕೀಯಕ್ಕಾಗಿ ರಾಜಕಾರಣದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಬಾರಿ ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯೇ ಹೆಚ್ಚಿನ ಮತಗಳನ್ನು ಗಳಿಸಿದ್ದಾರೆ. ಹಾಗಾಗಿ ನಮ್ಮ ಪಕ್ಷ ಗೆಲುವು ಸಾಧಿಸುವುದು ಗ್ಯಾರಂಟಿ ಎಂದರು.
ಇಂದು ಮತ್ತು ನಾಳೆ ಸೇರಿದಂತೆ ಒಟ್ಟು ಮೂರು ದಿನಗಳ ಕಾಲ ತಾವು ಶಿಗ್ಗಾಂವಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.
ತೆರಿಗೆ ವಿಷಯಕ್ಕೆ ಸಂಬAಧಪಟ್ಟ ಕೇಂದ್ರದಿAದ ಅನ್ಯಾಯವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಅವರು, ಒಟ್ಟು ರಾಜ್ಯದಿಂದ ೪.೫ ಕೋಟಿ ಲಕ್ಷ ರೂಪಾಯಿ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಆದರೆ ರಾಜ್ಯಕ್ಕೆ ಬರುವುದು ಮಾತ್ರ ೫೦ರಿಂದ ೬೦ ಸಾವಿರ ಕೋಟಿ ರೂಪಾಯಿ ಮಾತ್ರ. ಇದು ಸರಿಯೇ ಎಂದು ಪ್ರಶ್ನಿಸಿದರು. ೧೬ನೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಬರೀ ರಾಜಕೀಯ ಹೋರಾಟವೇ ನಡೆಯುತ್ತದೆ.
ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ೫೨ ಸಾವಿರ ಕೋಟಿ ತೆಗೆದಿಡಲಾಗಿದೆ. ಉಳಿದ ಹಣವನ್ನು ರಾಜ್ಯದ ವಿವಿಧ ಯೋಜನೆಗಳ ಅಭಿವೃದ್ಧಿಗೆ ವೆಚ್ಚ ಮಾಡಲು ವಇನಿಯೋಗಿಸಲಾಗಿದೆ. ಇದು ಅಭಿವೃದ್ಧಿಯಲ್ಲವೇ ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ೧೬೫ ಭರವಸೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಈ ಪೈಕಿ ೧೫೮ ಭರವಸೆ ಈಡೇರಿಸಲಾಗಿದೆ. ಇದೆಲ್ಲಾ ಅಭಿವೃದ್ಧಿಯಲ್ಲವೇ ಎಂದು ತಿರುಗೇಟು ನೀಡಿದರು.
ಪ್ರತಾಪ್ ಸಿಂಹ ಬಗ್ಗೆ ಪ್ರಸ್ತಾಪಿಸಿದಾಗ ಆತನೊಬ್ಬ ಕೋಮುವಾದಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಆತನಿಗೆ ಗೌರವವಿಲ್ಲ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾನೆ ಎಂದು ಕಿಡಿಕಾರಿದರು.