ಬೆಂಗಳೂರು: ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕ ಪಾಲ್ ಅವರು ರಾಜ್ಯಕ್ಕೆ ನೀಡಿರುವ ಭೇಟಿ ರಾಜಕೀಯ ಪ್ರೇರಿತವಾದುದು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ಸಮಿತಿಯ ಸದಸ್ಯರಿಲ್ಲದೆ ಅಧ್ಯಕ್ಷರೊಬ್ಬರೇ ಭೇಟಿ ನೀಡಿರುವುದು ರಾಜಕೀಯ ಪ್ರೇರಿತ ಎಂದಿದ್ದಾರೆ.
ಅವರ ಭೇಟಿ ಬಗ್ಗೆ ಸಮಿತಿ ಸದಸ್ಯರೇ ಅಪಸ್ವರ ಎತ್ತಿದ್ದಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.