ಬೆಂಗಳೂರು: ಕುಮಾರಸ್ವಾಮಿ ಅವರಿಗೆ ಸಲಹೆ ಕೊಡ್ತೇನೆ, ರಾಜ್ಯಕ್ಕೆ ಸ್ಟೀಲ್ ಫ್ಯಾಕ್ಟರಿ ತನ್ನಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಪ್ರಭಾವ ಕೇಂದ್ರದಲ್ಲಿ ಬಳಸಿ ದೊಡ್ಡ ಕೈಗಾರಿಕೆ ರಾಜ್ಯಕ್ಕೆ ತಂದರೆ ನಿಮ್ಮ ಹೆಸರು ರಾಜ್ಯದಲ್ಲಿ ಶಾಶ್ವತವಾಗಿ ಉಳಿಯುತ್ತೆ, ಭದ್ರಾವತಿ ಕೈಗಾರಿಕೆ ಸೊರಗುತ್ತಿದೆ, ಅದು ಮುಚ್ಚುವ ಸ್ಥಿತಿಯಲ್ಲಿದೆ.
ಭದ್ರಾವತಿ ಕೈಗಾರಿಕೆ ಪುನರುಜ್ಜೀವನ ಮಾಡಿಬೇಕಾದಷ್ಟು ಕೈಗಾರಿಕೆಗಳಿವೆ, ಅವಕ್ಕೆ ಶಕ್ತಿ ತುಂಬಿ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳಿಗೆ ರಾಜ್ಯಕ್ಕೆ ತಂದು ಬಂಡವಾಳ ಹೂಡುವಂತೆ ಮಾಡಿ, ಸುಮ್ಮನೆ ರಾಜಕೀಯಕ್ಕೆ ಆರೋಪ ಮಾಡೋದು ಸರಿಯಲ್ಲ ಆರೋಪಕ್ಕೆ ದಾಖಲೆ ಇದ್ದರೆ ಕುಮಾರಸ್ವಾಮಿ ಕೊಡಲಿ ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಅವರ 60% ಕಮೀಷನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಅವರು ಆರೋಪ ಮಾಡಿದ್ದಾರೆ ಅಂದ್ರೆ ನಾವು ಗಂಭೀರವಾಗಿಯೇ ತಗೋತೇವೆ. ಈ ಆರೋಪವನ್ನು ಸಿಎಂ ನಿರಾಕರಿಸಿದ್ದಾರೆ, ದಾಖಲೆ ಕೊಡಿ ಎಂದಿದ್ದಾರೆ.