ಬೆಳಗಾವಿ: ಪ್ರಯಾಗ್ರಾಜ್ನಲ್ಲಿ ನಡೆದ ಕಾಲ್ತುಳಿತದಲ್ಲಿ ಕರ್ನಾಟಕದ ಕೆಲವು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. ಬೆಳಗಾವಿಯ ದಂಪತಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಳಗಾವಿ ನಗರದ ಶೆಟ್ಟಿಗಲ್ಲಿ ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಗಾಯಗೊಂಡಿದ್ದು ಸದ್ಯ ಪ್ರಯಾಗ್ರಾಜ್ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲ್ತುಳಿತದ ವೇಳೆ ದಂಪತಿ ಬೇರೆ ಬೇರೆಯಾಗಿದ್ದಾರೆ.
ಸದ್ಯ ಅರುಣ್ ಒಂದು ಆಸ್ಪತ್ರೆಯಲ್ಲಿ, ಕಾಂಚನಾ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.
ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಭಾನುವಾರ ಬೆಳಗಾವಿಯಿಂದ ಹೊರಟ್ಟಿದ್ದರು. ಸದ್ಯ ಕಾಂಚನಾ ನಿರಂತರವಾಗಿ ಪುತ್ರ ಓಂಕಾರ್ ಜೊತೆಗೆ ಪೋನ್ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಓಂಕಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ತಂದೆ ತಾಯಿಗೆ ಏನೂ ಆಗಿಲ್ಲ. ಗಾಯವಾಗಿದೆ ಅಷ್ಟೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರೆ ಬೇರೆ ಆಸ್ಪತ್ರೆಯಲ್ಲಿ ಅಪ್ಪ, ಅಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಎನೂ ತೊಂದರೆ ಇಲ್ಲ, ಅರಾಮಗಿದ್ದೇವೆ ಎಂದು ತಾಯಿ ಕಾಂಚನಾ ತಿಳಿಸಿದ್ದಾರೆ ಎಂಬುದಾಗಿ ಓಂಕಾರ್ ತಿಳಿಸಿದ್ದಾರೆ.