ಬೆಂಗಳೂರು: ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಬೆಳಗಾಂ ಮತ್ತು ಬೆಂಗಳೂರು ಸೇರಿದಂತೆ ಏಳು ಜಿಲ್ಲಾ ಮತ್ತು ಬೆಂಗಳೂರು ನಗರ ಪ್ರದೇಶಗಳಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಇಂದು ಬೆಳ್ಳಂಬೆಳ್ಳಿಗ್ಗೆ ದಾಳಿ ನಡೆಸಿರುತ್ತಾರೆ.
ರಾಯಚೂರು ಜಿಲ್ಲೆಯ ಸಂಜಯ್ ವೆಟರ್ನರಿ ಇನ್ಸ್ ಪೆಕ್ಟರ್, ಬೆಂಗಳೂರಿನ ಹೆಬ್ಬಾಳದ ಮಾಧವ ರಾವ್ ಎಇ ಇ, ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗ, ಟಿ.ಕೆ. ರಮೇಶ್ ಡೆಪ್ಯೂಟಿ ಸೆಕ್ರೆಟರಿ ಜಿಲ್ಲಾ ಪಂಚಾಯತ್ ರೂರಲ್ ಮತ್ತು ಪಂಚಾಯತ್ ರಾಜ್, ಸಚಿನ್ ಬಂಡೇಡ್ ರಿಜಿಸ್ಟ್ರೇಷನ್ ಅಂಡ್ ಸ್ಟ್ಯಾಂಪ್ ಇನ್ ಜಾರ್ಜ್ ಸಬ್ ರಿಜಿಸ್ಟರ್ ಬೆಳಗಾಂ,ನರಸಿಂಗ ರಾವ್ ಗುಜ್ಜಾರ್ ಅಸಿಸ್ಟೆಂಟ್ ಅಕೌಂಟೆಂಟ್ ಆಫೀಸರ್ ಜಿಲ್ಲಾ ಪಂಚಾಯತ್ ರಾಯಚೂರು, ಶಿವಲಿಂಗಯ್ಯ ಹಿರೇಮಠ್ ಪಿ ಡಿ ಓ ಹೊಳಲಗೇರಿ ಗ್ರಾಮ ಬಾಗಲಕೋಟೆ, ಶಶಿಧರ್ ಡಿಸ್ಟ್ರಿಕ್ಟ್ ಬ್ಯಾಕ್ವರ್ಡ್ ಡಿಪಾಟ್ರ್ಮೆಂಟ್ ಮೆನೇಜರ್ ಚಿತ್ರದುರ್ಗ.
ಏಳು ಜನ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿರುವ ಅಪಾರ ಮೌಲ್ಯದ ನಿವೇಶನ ಮತ್ತು ಮನೆಯ ಪತ್ರಗಳನ್ನು ಹಾಗೂ ಚಿನ್ನಾಭರಣ, ನಗದು ಸೇರಿದಂತೆ ಇದರ ವಸ್ತುಗಳನ್ನು ವಶಪಡಿಸಿಕೊಂಡು ಇನ್ನೂ ತನ್ನಿಕೆ ಮುಂದುವರೆಸಿರುತ್ತಾರೆ.
ನಾಳೆ ಈ ಅಧಿಕಾರಿಗಳ ಬ್ಯಾಂಕ್ ಅಕೌಂಟ್ ಗಳನ್ನು ಮತ್ತು ಬ್ಯಾಂಕುಗಳಲ್ಲಿ ಇರುವ ಲಾಕ್ಕರ್ಗಳನ್ನು ಓಪನ್ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿರುತ್ತಾರೆ.