ಬೆಂಗಳೂರು: ರಾಜ್ಯಪಾಲರು ಪದೇ ಪದೇ ಸರ್ಕಾರಕ್ಕೆ ಪತ್ರ ಬರೆಯುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ರಾಜ್ಯಪಾಲರ ಅತ್ಯಂತ ಜವಾಬ್ದಾರಿಯುತ ಸ್ಥಾನವಾಗಿದ್ದು, ಸಂವಿಧಾನ ರಕ್ಷಣೆ ಮಾಡುವ ಸ್ಥಾನ ಕೊಡಲಾಗಿದೆ. ಸಂವಿಧಾನ ಯಾವ ರೀತಿ ರಕ್ಷಣೆ ಮಾಡಬೇಕು ಅಂತ ಅಧಿಕಾರ ಕೊಟ್ಟಿದ್ದಾರೆ. ಪ್ರಥಮಬಾರಿಗೆ ಈ ರೀತಿಯಾಗಿದೆ.
ಪ್ರತಿನಿತ್ಯ ಆಡಳಿತದಲ್ಲಿ ಸರ್ಕಾರದ ಕಾರ್ಯದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದ ಸಂದರ್ಭಗಳೇ ಇಲ್ಲ. ಇತಿಹಾಸದಲ್ಲಿ ಕರ್ನಾಟಕದಲ್ಲಿ ಈ ರೀತಿ ಕೇಳಿಲ್ಲ. ಇಲ್ಲಿಯವರೆಗೆ ಅನೇಕ ಗೌರ್ನರ್ ಗಳ ಬಂದಿದ್ದಾರೆ. ಆದರೆ ದಿನ ನಿತ್ಯ ಪತ್ರ ಬರೆದು ಪತ್ರದ ಮೂಲಕ ಮಾಹಿತಿ ಕೊಡಿ ಅಂತಿದ್ದಾರೆ. ಸರ್ಕಾರದ ತೀರ್ಮಾನ ಗಳ ಬಗ್ಗೆ ಮಾಹಿತಿ ಕೇಳಿದ ಉದಾಹರಣೆ ಇಲ್ಲ ಎಂದು ಹೇಳಿದ್ದಾರೆ.
ಕೆಲವೊಂದು ಸಂದರ್ಭಗಳಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳು,ಕಾನೂನು ಸುವ್ಯವಸ್ಥೆ ವಿಚಾರ ಬಂದರೆ ಗೃಹ ಸಚಿವರು ರಾಜ್ಯಪಾಲರಿಗೆ ಮಾಹಿತಿ ನೀಡುತ್ತಾ ಇದ್ದರು. ಅವರಿಗೆ ಸಚಿವರನ್ನ ಕರೆದು ಮಾಹಿತಿ ಪಡೆವ ಹಕ್ಕು ಇದೆ. ಸರ್ಕಾರದಲ್ಲಿ ಸಿಎಂ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಯಾವುದೇ ವರದಿ ಇಲ್ಲ ಅನುಮತಿ ಕೊಟ್ಟಿದಕ್ಕೆ ನಾವು ಪ್ರತಿಭಟನೆ ಮಾಡಿದ್ವಿ. ಯಾವುದೇ ತನಿಖೆ ಇಲ್ಲ. ಚುನಾವಣಾಯಿತ ಮುಖ್ಯಮಂತ್ರಿಗೆ ಶೋಕಾಸ್ ಮಾಡಿದಕ್ಕೆ ಪ್ರತಿಭಟನೆ ಮಾಡಿದ್ದು, ವರದಿಯಲ್ಲಿ ಸಿಎಂ ಪ್ರಸ್ತಾಪ ಇದ್ದರೆ ಅನುಮತಿ ಕೊಟ್ಟರೆ ನಮ್ಮದು ತಕರಾರು ಇಲ್ಲ. ಯಾರೋ ದೂರ ಕೊಟ್ಟರು ಅಂತ ಅನುಮತಿ ಕೊಟ್ಟಿದ್ದು ಸರಿಯಲ್ಲ. ಸಿಎಂಗೆ ಒಂದು ಮಾನದಂಡ ಕುಮಾರಸ್ವಾಮಿಗೆ ಒಂದು ಮಾನದಂಡ ಅಲ್ಲ. ಸಿಎಂ, ಮಂತ್ರಿಗಳಾದವರಿಗೆ ನೀವು ಅನುಮತಿ ಕೊಟ್ಟಿಲ್ಲನಾವು ಹೋದ ಮೇಲೆ ಸ್ಪಷ್ಟನೆ ಕೇಳಿದ್ದು, ಅದಕ್ಕೆ ಲೋಕಾಯುಕ್ತರು ಸ್ಪಷ್ಟನೆ ಕೊಟ್ಟಿದ್ದಾರೆ. ಈಗ ಅನುಮತಿ ಕೊಡಬೇಕು ಅಲ್ವ ಎಂದಿದ್ದಾರೆ.
ಮುನಿರತ್ನ ವಿರುದ್ಧ ಎಸ್ಐಟಿ ರಚನೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಎಸ್ ಐಟಿ ಮಾಡಿದ್ದೇವೆ. ಯಾಕೆಂದರೆ ಮುನಿರತ್ನ ವಿರುದ್ಧ ಪ್ರತಿನಿತ್ಯ ಕೇಸ್ ದಾಖಲಾಗುತ್ತಿದೆ. ಒಂದು ಕೇಸ್ ಅಂತ ಬಂಧಿಸಿದ್ವಿ. ಅದರೆ ಈಗ ಅನೇಕ ಪ್ರಕರಣಗಳು ದಾಖಲಾಗುತ್ತಿವೆ. ಅದಕ್ಕೆ ಎಸ್ಐಟಿ ವಶಕ್ಕೆ ಪಡೆದು ತನಿಖೆ ಮಾಡುತ್ತೆ ಎಂದು ಹೇಳಿದ್ದಾರೆ.
ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಪೊಲೀಸರು ಈಗಾಗಲೇ ಒಂದಿಷ್ಟು ಮಾಹಿತಿ ಸಂಗ್ರಹ ಮಾಡಿದ್ದಾರೆ. ಅದನ್ನ ನಾನು ಹೊರಗಡೆ ಹೇಳೋಕೆ ಸಾಧ್ಯ ಇಲ್ಲ. ಅದರೆ ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸುತ್ತೇವೆ. ಒಬ್ಬರೋ ಇಬ್ಬರೋ ಬಂಧಿಸುತ್ತೇವೆ ಎಂದಿರುವ ಅವರು, ಪಿಎಸ್ಐ ಪರಶುರಾಮ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಪತ್ನಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಬೇಡ ಅಂದರು. ಅದಕ್ಕೆ ಡಿಪಿಆರ್ ನವರು ವರ್ಕ್ ಔಟ್ ಮಾಡುತ್ತಾರೆ ಎಂದು ವಿವರ ನೀಡಿದ್ದಾರೆ.