ಮೈಸೂರು: ದಕ್ಷಿಣ ಕನ್ನಡದ ಅನ್ಶುಲ್ ಹಾಗೂ ಕೊಡಗಿನ ಜೀವಿತಾ ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್ ಹಾಗೂ ಮಹಾರಾಜ ಕಾಲೇಜಿನಲ್ಲಿ ಮಂಗಳವಾರ ಆರಂಭವಾದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ನ ಬಾಲಕ ಹಾಗೂ ಬಾಲಕಿಯರ ವಿಭಾಗದ ಪಂದ್ಯದಲ್ಲಿ ಜಯ ಗಳಿಸಿದರು.
ಶಾಲಾ ಶಿಕ್ಷಣ (ಪಿಯು) ಇಲಾಖೆ ಹಾಗೂ ರಾಮಕೃಷ್ಣ ವಿದ್ಯಾಶಾಲಾ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅನ್ಶುಲ್ 15-10, 15-11 ಪಾಯಿಂಟ್ಗಳಿಂದ ಚಿತ್ರದುರ್ಗದ ವೀರೇಶ್ ಅವರನ್ನು ಮಣಿಸಿದರೆ, ಜೀವಿತಾ 15-7, 15-6ರಿಂದ ಬೀದರ್ನ ರಾಧಿಕಾ ವಿರುದ್ಧ ಗೆದ್ದರು.