ಬೆಂಗಳೂರು: ಕರ್ನಾಟಕ ಬಂದ್ ಗೆ ಕರೆ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿಗಳು ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.ಬೆಂಗಳೂರು ಮಟ್ಟದಲ್ಲಿ ಕೂಡ ಮಾತುಕತೆ ನಡೆಯುತ್ತಿದೆ. ನಮ್ಮ ಮೇಲೆ ಆರೋಪ ಮಾಡಬಹುದು, ಎಲ್ಲವೂ ಸರಿ ಹೋಗಲಿದೆ. ಪೊಲೀಸ್ ಅಧಿಕಾರಿ ಮಾಡಿದ ತಪ್ಪು. ನಮ್ಮ ಜವಾಬ್ದಾರಿ ಅಲ್ಲ ಅದು, ಪೊಲೀಸ್ ಜವಾಬ್ದಾರಿ ಕಂಡಕ್ಟರ್ ಮೇಲೆ ಹಾಕಿದ ಕೇಸ್ ಗೆ ಇಷ್ಟು ದೊಡ್ಡದಾಗಿದೆಈಗಾಗಲೇ ಪೊಲೀಸ್ ಅಧಿಕಾರಿ ವರ್ಗಾವಣೆಯಾಗಿದೆ.
ಪೊಲೀಸ್ ನಮ್ಮ ಅಡಿಯಲ್ಲಿ ಕೆಲಸ ಮಾಡಬೇಕು ಅಂತಾ ಏನಿಲ್ಲಾ. ಹೆಚ್ಚುವರಿಯಾಗಿ ಪ್ರಕರಣ ದಾಖಲು ಮಾಡಿದ್ದು ತಪ್ಪು. ಮೇಲಿನ ಅಧಿಕಾರಿಗಳ ಮಾತು ಕೇಳಬೇಕಿತ್ತು. ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ. ಸದ್ಯ ಶಾಂತವಾಗಿದೆ, ಮತ್ತೆ ಕದಡಿಸುವುದು ಬೇಡ ಬಂದ್ ಮಾಡಿದರೆ ಬೆಳಗಾವಿ ನಗರಕ್ಕೆ ತೊಂದರೆ ಆಗುತ್ತೆ ಎಂದು ಅವರು ಹೇಳಿದ್ದಾರೆ.ಕ್ಷೇತ್ರಗಳ ಮರು ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಆತಂಕ ವಿಚಾರಕ್ಕೆ ಪ್ರತಿಕ್ರಿಯಿಸಿ, ದಕ್ಷಿಣ ಭಾರತದಲ್ಲಿ ಕ್ಷೇತ್ರ ಕಡಿಮೆಯಾಗಲಿವೆ. ಅದರ ಬಗ್ಗೆ ಪ್ರತಿಭಟನೆ ಮಾಡಬೇಕಿದೆ. ನಮಗೆ ಕ್ಷೇತ್ರಗಳು ಹೆಚ್ಚಾಗಬೇಕು, ಆದರೆ ಕಡಿಮೆಯಾಗಲಿದೆ ಎಂದಿದ್ದಾರೆ.