ದೇವನಹಳ್ಳಿ: ತಾಲೂಕಿನ ಕನ್ನಮಂಗಲದ ಕೆ.ಆರ್.ನಾಗೇಶ್ ಆನ್ಲೈನ್ ಮತದಾನದಲ್ಲಿ 18032 ಮತಗಳನ್ನು ಪಡೆಯುವ ಮೂಲಕ ಕರ್ನಾಟಕ ಪ್ರದೇಶಕಾಂಗ್ರೆಸ್ನ ಯುವ ಕಾಂಗ್ರೆಸ್ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.ಈ ಹಿಂದೆ ಯುವ ಕಾಂಗ್ರೆಸ್ಗೆ ತಾಲೂಕು ಅಧ್ಯಕ್ಷರಾಗಿ ನಂತರ ಯುವಕಾಂಗ್ರೆಸ್ನ ಜಿಲ್ಲಾ ಅದ್ಯಕ್ಷರಾಗಿ 12 ವರ್ಷ ಪಕ್ಷಸಂಘಟನೆ ಮತ್ತು ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಯುವಪಡೆಯನ್ನು ಸಜ್ಜುಗೊಳಿಸಿ ಉತ್ತಮ ಸಂಘಟಕನೆಂದು ಹೆಸರು ಮಾಡಿದ್ದ ಕೆ.ಆರ್. ನಾಗೇಶ್ ಗ್ರಾಮಾಂತರ ಜಿಲ್ಲೆಯಿಂದ ರಾಜ್ಯ ಯುವಕಾಂಗ್ರೆಸ್ನ ಪ್ರಧಾನಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಕಳೆದ ಮೂರು ತಿಂಗಳ ಹಿಂದೆ ನಡೆದ ಪ್ರಾಥಮಿಕ ಸದಸ್ಯತ್ವ ನೊಂದಣಿ ಮಾಡಿಸಿಕೊಂಡವರು ಈ ಬಗ್ಗೆ ಸಂತಸ ಹಂಚಿಕೊಂಡು ಅವರು ಮಾತನಾಡಿ, ಮೂರ್ನಾಲ್ಕು ತಿಂಗಳುಗಳಿಂದ ಸದಸ್ಯತ್ವ ನೊಂದಣಿ ಅಭಿಯಾನ ಆರಂಭವಾಗಿತ್ತು ಅದರ ಜೊತೆಜೊತೆಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗಾಗಿ ಆನ್ಲೈನ್ ಮೂಲಕ ಸದಸ್ಯತ್ವ ಪಡೆದವರು ವೋಟ್ ಮಾಡುವ ಅವಕಾಶವಿತ್ತು ರಾಜ್ಯ ಯುವ ಘಟಕಕ್ಕೆ ಸಾಮಾನ್ಯ ಸ್ಥಾನದ ಪ್ರಧಾನಕಾರ್ಯದರ್ಶಿಯ 10 ಹುದ್ದೆಗಳಿಗೆ ರಾಜ್ಯದ ವಿವಿಧ ಭಾಗಗಳಿಂದ 101 ಆಕಾಂಕ್ಷಿಗಳು ಸ್ಪರ್ಧಿಸಿದ್ದರು.
ಅದರಲ್ಲಿ ನಾನು ಸಹ ಒಬ್ಬ ನನ್ನ ಮೇಲೆ ಭರವಸೆ ಇಟ್ಟು ನನಗೆ 18032 ಮತಗಳನ್ನು ನೀಡುವ ಮೂಲಕ ಕಾರ್ಯಕರ್ತ ಸದಸ್ಯರು ನನ್ನ ಗೆಲುವಿಗೆ ಕಾರಣರಾಗಿರುವುದಕ್ಕೆ ನಾನು ಅವರಿಗೆಲ್ಲಾ ಕೃತಜ್ಞನಾಗಿದ್ದೆನೆ ನನ್ನ ಮೇಲೆ ರಾಜ್ಯದಲ್ಲಿ ಯುವ ಪಡೆಯನ್ನು ಸಂಘಟಿಸಿ ಯುವ ಕಾಂಗ್ರೆಸ್ ಪಕ್ಷವನ್ನು ಸದೃಡಗೊಳಿಸುವ ಜವಾಬ್ದಾರಿ ನೀಡಿರುವುದನ್ನು ಅತ್ಯಮತ ವಿನಯದಿಂದ ಸ್ವೀಕರಿಸಿ ನನ್ನ ಜವಾಬ್ದಾರಿ ನಿಭಯಿಸಲು ಪ್ರಾಮಾಣಿಕ ಕರ್ತವ್ಯ ಮಾಡುತ್ತೇನೆ ಈ ಹಿಂದೆಯೂ ತಾಲುಕು ಯುವಕಾಂಗ್ರೆಸ್ನ ಹಾಗೂ ಅದರ ನಂತರ ಜಿಲ್ಲಾಯುವ ಕಾಂಗ್ರೆಸ್ನ ಅಧ್ಯಕ್ಷನಾಗಿ 12 ವರ್ಷ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೆನೆ ಅದೇ ರೀತಿ ಮುಂಬರಲಿರುವ ಜಿ.ಪಂ. ತಾ.ಪಂ ಸೇರಿದಂತೆ ಎಲ್ಲಶಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಹೈಕಮಾಂಡ್ ಹಾಗೂ ನಮ್ಮ ರಾಜ್ಯಾಧ್ಯಕ್ಷರು ಮುಖಂಡರ ಮಾರ್ಗದಶ್ನ ಪಡೆದು ಕೆಲಸ ಮಾಡುತ್ತನೆ ಎಂದರು.ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದ ಕೆ.ಆರ್. ನಾಗೇಶ್ರವರನ್ನು ಅಭಿನಂದಿಸುತ್ತಿರುವ ವೇಳೆ ಗೊಡ್ಲುಮುದ್ದೇನಹಳ್ಳಿ ಮುನಿರಾಜು. ತತ್ತಮಂಗಲ ರಮೇಶ್, ಹುರಳಗುರ್ಕಿ ವಿಜಯಕುಮಾರ್ ಮತ್ತು ಕಾರ್ಯಕರ್ತರು ಮುಖಂಡರು ಇದ್ದರು.