ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಎಸ್,ಸಿ ಎಸ್ ಟಿ ಹಾಗೂ ಆದಿವಾಸಿಗಳಿಗೆ ಮೀಸಲಿಟ್ಟ ವಿಶೇಷ ಅನುದಾನವನ್ನು ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳಿಗಾಗಿ ದುರ್ಬಳಕೆ ಮಾಡಿಕೊಂಡಿರುವ ಕ್ರಮ ಸಂವಿಧಾನ ಬಾಹಿರವಾಗಿದೆ. ಅನುದಾನ ದುರ್ಬಳಕೆ ಸಮರ್ಥಿಸುವ ಮುಖ್ಯಮಂತ್ರಿ ಎನ್ನುವ ಸಿದ್ಧರಾಮಯ್ಯ,ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಾದೇವಪ್ಪ ಅವರಿಗೆ ಶೋಭೆ ತರುವುದಿಲ್ಲ ಕನ್ನಡ ಸಿನಿಮಾ ನಟ ಚೇತನ್ ಅಹಿಂಸಾ ರಾಜ್ಯ ಸರ್ಕಾರದ ಕ್ರಮವನ್ನು ಕನ್ನಡ ಚಲನಚಿತ್ರ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಕಿಡಿಕಾರಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ಮೈಸೂರು ಮುಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕೆಯಾಗಿದೆ.ಸರ್ಕಾರ ಮುಡಾ ಅಭಿವೃದ್ಧಿಗಾಗಿ ದಲಿತರ ಭೂಮಿ ಬಳಸಿಕೊಂಡಿರುವುದು ಸರಿಯಲ್ಲ.ಇದರಲ್ಲಿ ಯಾರಲ್ಲಾ ಭಾಗಿಯಾಗಿದ್ದಾರೆ ಎಂಬುದನ್ನು ಪಕ್ಷಾತೀತವಾಗಿ ಪಾರದರ್ಶಕವಾಗಿ ತನಿಖೆಗೆ ಒಳಪಡಿಸಬೇಕು.
ಮುಡಾ ಹಗರಣ ಬಿಜೆಪಿ ಅವಧಿಯಲ್ಲಿ ಆಗಿರುವುದು ಎಂದು ಸಿಎಂ ಸಿದ್ಧರಾಮಯ್ಯ ಹೇಳುತ್ತಿರವುದು ತಪ್ಪು ಎಂದು ಕಿಡಿಕಾರಿದರುಬುಡಕಟ್ಟು ಜನರ ಅಭಿವೃದ್ಧಿಗಾಗಿ ಮೀಸಲಿದ್ದ ವಾಲ್ಮೀಕಿ ನಿಗಮದಲ್ಲಿ ಕೋಟಿ ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಗಂಭೀರವಾಗಿದೆ.ಇದನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ.ಬಿ.ನಾಗೇಂದ್ರ ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದ ವ್ಯಕ್ತಿ. ಮಂತ್ರಿ ಆಗಲು ಅರ್ಹತೆ ಇಲ್ಲದ ವ್ಯಕ್ತಿ. ಎಸ್.ಐ.ಟಿ. ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಇ.ಡಿ. ಪ್ರವೇಶ ಮಾಡಿದ ನಂತರ ತನಿಖೆ ಚುರುಕುಗೊಂಡಿದೆ.
ತೆಲಂಗಾಣ-ಆಂಧ್ರಕ್ಕೆ ಆ ಹಣ ಹೋಗಿದೆ ಅನ್ನೋದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು.ಕೂಡಲೇ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ತನಿಖೆ ಆಗಿ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ತನಿಖಾ ಸಂಸ್ಥೆಗಳ ದುರ್ಭಳಕೆ ತಪ್ಪು ಎಂದರು.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕುರಿಗಾಹಿಗಳಿಗೆ ಬಂದೂಕು ನೀಡಲು ಮುಂದಾಗಿರುವ ಕ್ರಮ ಖಂಡಿಸಿದ ಚೇತನ್ ಇದು ಸರಿಯಲ್ಲ.ಸಮಾಜದ ಶಾಂತಿ ಸುರಕ್ಷತೆಗೆ ಹಾನಿಕಾರಕ.ಬಂದುಕು ಕೊಡುತ್ತಿರುವುದು ರಕ್ಷಣೆ ಬದಲಿಗೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡಲಿದೆ.ಇನ್ನು ಅರಣ್ಯ ಪ್ರದೇಶವನ್ನು ಕುರಿಗಾಯಿಗಳಿಗೆ ಮೀಸಲು ಇಡಬೇಕೆಂಬ ಚಿಂತನೆ ಕೂಡ ಸರಿಯಾಗಿಲ್ಲ ಎಂದರು.
ವಿಧಾನಸೌಧ ಆವರಣದಲ್ಲಿ 25 ಅಡಿ ಎತ್ತರದ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮೌಢ್ಯದ ಪ್ರತೀಕ.ಈ ಮೂಲಕ ವೈಜ್ಞಾನಿಕ ಮನಸ್ಥಿತಿಯನ್ನೇ ಹೋಗಲಾಡಿಸುವ ಪ್ರಯತ್ನವಿದೆ.ಇದಕ್ಕೆ ಅವಕಾಶ ನೀಡಬಾರದಿತ್ತು.ಇದನ್ನು ಎಲ್ಲರೂ ಖಂಡಿಸಬೇಕು ಎಂದು ನಟ ಚೇತನ್ ಹೇಳಿದರು.ನಟ ದರ್ಶನ್ ಆರೋಪಿಯಷ್ಟೆ.ಆದರೆ ಆರೋಪಗಳು ಗಂಭೀರವಾಗಿವೆ.ಈ ವಿಚಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಪೊಲೀಸರು ತನಿಖೆ ನಡೆಸಿ ಕೋರ್ಟಿನಲ್ಲಿ ವಿಚಾರಣೆ ಆದ ನಂತರ ಅಲ್ಲಿ ನೀಡುವ ತೀರ್ಪು ಅವರು ಅಪರಾಧಿಯೋ ನಿರಪರಾಧಿಯೋ ಗೊತ್ತಾಗಲಿದೆ.
ಇದಕ್ಕೂ ಮೊದಲೇ ಮಾಧ್ಯಮಗಳು ಅವರನ್ನು ಅಪರಾಧಿ ಎಂದು ಕರೆದಿರುವುದನ್ನು ನಾನು ಒಪ್ಪುವುದಿಲ್ಲ.ಸಿನಿಮಾ ಮಂದಿ ಕೂಡ ಈ ವಿಚಾರದಲ್ಲಿ ಮಾತನಾಡುತ್ತಿರವುದು ಒಳ್ಳೆಯ ಬೆಳವಣಿಗೆ.ಹಂಸಲೇಖರ ಪ್ರಕರಣ ಆದಾಗಲೂ ಇವರು ತುಟಿ ಬಿಚ್ಚಿರಲಿಲ್ಲ.ಪ್ರತಿಯೊಬ್ಬರಿಗೂ ಪ್ರತಿಕ್ರಿಯೆದೇಶದ ಪ್ರಧಾನಿಗಳು 10 ವರ್ಷಅಧಿಕಾರದಲ್ಲಿದ್ದರೂ ಈವರೆಗೆ ಮಾಧ್ಯಮ ದವರ ಮುಂದೆ ಬಂದು ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಕೆಲಸ ಮಾಡಿಲ್ಲ.ಅವರ ತಲೆಯಲ್ಲಿ ಏನಿದೆ ಎಂದು ಗೊತ್ತಿಲ್ಲ ಎಂದರು.ಈ ವೇಳೆ ಹೈಕೋರ್ಟ್ ನ್ಯಾಯವಾದಿ ಪ್ರೊ .ಎ.ಹರಿರಾಮ್ ಸೇರಿದಂತೆ ಮತ್ತಿತರರು ಇದ್ದರು.