ಮಳವಳ್ಳಿ: ಎಸ್ಸಿಟಿಎಸ್ಸಿಪಿ ಹಣ ದುರ್ಬಳಿಕೆಯನ್ನು ಖಂಡಿಸಿ ಬಿಎಸ್ಪಿ ಪಕ್ಷದಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ಬಿಎಸ್ಪಿ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡಿ, ತಮಿಳುನಾಡಿನ ಕೆ.ಆರ್ಮ ಸ್ಟ್ರಾಂಗ್ ಬಿಎಸ್ಪಿ ಅಧ್ಯಕ್ಷರಾದ ಅವರ ಹತ್ಯೆಯನ್ನು ಖಂಡಿಸಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದರು.
ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ಎಸ್ಸಿ, ಎಸ್ಸಿಪಿ ಎಸ್ಸಿಪಿ ಹಣ 25,000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ದುರ್ಬಳಕೆ ಮಾಡಿಕೊಂಡಿ ರುವುದುನ್ನು ಖಂಡಿಸುತ್ತೇವೆ ಎಂದರು.ಈ ದುರ್ಬಳಕೆ ಮಾಡಿರುವ ಹಣದಲ್ಲಿ ಮಕ್ಕಳ ಶಿಕ್ಷಣಕ್ಕೆ ಹಾಗೂ ಮನೆ ನಿರ್ಮಿಸಿಕೊಡಲು ಬಳಸಿದ್ದಾರೆ ಎಷ್ಟೋ ದಲಿತ ಕುಟುಂಬಗಳಿಗೆ ಆಸರೆಯಾಗುತ್ತಿತ್ತು ಎಂದು ತಿಳಿಸಿದರು.
ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿರುವ ಶಾಸಕರು, ಎಂಎಲ್ಸಿಗಳು ಇದರ ಬಗ್ಗೆ ಒಬ್ಬರು ಮಾತನಾಡುತ್ತಿಲ್ಲ ಎಂದರು ಈ ಸಂದರ್ಭದಲ್ಲಿ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಎಚ್.ಎನ್.ವೀರಭದ್ರಯ್ಯ, ಉಮೇಶ್ ಎಸ್.ಮೌರ್ಯ, ಲೋಕೇಶ್ ಗೌಡ, ಅನಂತ್ ಕುಮಾರ್, ಸುಧಾಕರ್, ಗೋವಿಂದರಾಜ ದೇವರಾಜು, ದೌಲತ್ ಪಾಷ, ಆಶಾದುಲ್ಲ ವೆಂಕಟೇಶ್ ಅವರು ಪಾಲ್ಗೊಂಡಿದ್ದರು.