ರಾಮನಗರ: ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವ ಕ್ರಮವನ್ನು ವಿರೋಧಿಸಿ, ಸಂಘಟನೆಗಳು ಚರ್ಚೆ ಮಾಡಿದ್ದು ರಾಜ್ಯಪಾಲರನ್ನು ಬೇಟಿ ಮಾಡುವ ಬಗ್ಗೆ ಒಕ್ಕೊರಲಿನ ತೀರ್ಮಾನ ಕೈಗೊಂಡಿರುವುದಾಗಿ ಪ್ರಗತಿಪರ ಒಕ್ಕೂಟದ ಕುಮಾರಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಜಿಲ್ಲೆಯ ಹೆಸರನ್ನು ಮರುನಾಮಕರಣ ಘೋಷಣೆ ಮುನ್ನಾ ಜಿಲ್ಲೆ ಹೆಸರು ಬದಲಾವಣೆ ಸಂಬಂಧ ಯಾರ ಚರ್ಚೆ ಮಾಡದೆಯೇ, ಸಚಿವ ಸಂಪುಟದಲ್ಲಿ ಸರ್ಕಾರ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವುದು ಜಿಲ್ಲೆಯ
ಜನತೆಗೆ ದ್ರೋಹವೆಸಗಿದೆ. ಕೂಡಲೇ ರಾಜ್ಯಪಾಲರು ಜಿಲ್ಲೆಯ ಮರುನಾಮಕರಣದ ಒಪ್ಪಿಗೆಗೆ ಅಂಕಿತ ಹಾಕ ಬಾರದು ಎಂದು ಮನವಿ ಮಾಡುತ್ತೇನೆ. ಅಲ್ಲದೆ ಜಿಲ್ಲೆಯ ಪ್ರಗತಿ ಪರರೆಲ್ಲರೂ ಸೇರಿ ಚರ್ಚೆ ನಡೆಸಿ ರಾಜ್ಯಪಾಲರನ್ನು ಶೀಘ್ರವಾಗಿ ಬೇಟಿ ಮಾಡಲಾಗುವುದು ಎಂದರು.
ಚನ್ನಪಟ್ಟಣದ ಉಪಚುನಾವಣೆಯ ಉದ್ದೇಶವಿರಿಸಿಕೊಂಡು ಜಿಲ್ಲೆಯ ಹೆಸರು ಬದಲಾವಣೆ ಮಾಡಿ ದ್ದಾರೆ. ಇದೇ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆ ಹೆಸರು ಘೋಷಿಸಿದಾಗ ನೀವು ಏಕೆ ಪ್ರಶ್ನೆ ಮಾಡಲಿಲ್ಲ. ರಾಮನಗರದ ಹೆಸರು ಬದಲಾವಣೆಯ ಪ್ರಸ್ತಾಪ ಬಂದಾಗಲೇ ಸ್ವಾಭಿಮಾನವಿರುವ ಕ್ಷೇತ್ರದ ಜನರು ಇಲ್ಲಿನ ಶಾಸಕರನ್ನು ಕ್ಷೇತ್ರಕ್ಕೆ ಸೇರಿಸಬಾರದಿತ್ತು ಎಂದರು.
ರೈತ ಪರವಾದ ಹೋರಾಟಗಾರರ ಮೇಲೆ ಪೋಲೀಸರು ಹಾಕಿರುವ ಕೇಸ್ ವಾಪಸ್ಸು ಪಡೆಯಲು ನೀವು ತೀರ್ಮಾನ ಮಾಡಿಲ್ಲ, ಪ್ರಮುಖ ನೀರಾವರಿ ಯೋಜನೆ ಅನುಷ್ಟಾನ ಸಂಬಂಧ ಕಠಣ ನಿಮ್ಮ ಸಚಿವ ಸಂಪುಟದಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳಲಾಗದ ನೀವು ಒಂದೇ ವಾರದಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣಕ್ಕೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತೀರಿ ಎಂದು ಸರ್ಕಾರದ ಕ್ರಮವನ್ನು ಪ್ರಶ್ನಿಸಿದರು.
ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ವಿ.ನರಸಿಂಹಮೂರ್ತಿ ಮಾತನಾಡಿ ಕನ್ನಡಪರ, ದಲಿತ ಪರ ಹೋರಾಟಗಾರರ ಮನವಿಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರ ಏಕಾಏಕಿ ಜಿಲ್ಲೆಯ ಹೆಸರನ್ನು ಮರು ನಾಮಕರಣ ಮಾಡಲು ಹೊರಟಿದ್ದಾರೆ. ಅಭಿವೃದ್ಧಿ ಎನ್ನುತ್ತೀರಿ ನಮ್ಮ ರಾಮನಗರ ಮಹಾನಗರ ಪಾಲಿಕೆ ಮಾಡಲು ಹೊರಟಿದ್ದೀರ, ಈಗಾಗಲೆ ಜಮೀನು ಮಾಲಿಕರು ಭೂಮಿ ಮಾರಾಟ ಮಾಡಿ ಅವರ ಬಳಿಯೆ ಕೂಲಿ ಕೆಲಸ ಮಾಡಲು ಹೋಗುತ್ತಿದ್ದಾರೆ.ಅಗಾಗಿ ರಾಮನಗರ ಜಿಲ್ಲೆಯೇ ಇರಲಿ ಆ ಹೆಸರಿನಲ್ಲಿಯೇ ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ಎಂದು ಡಿ.ಕೆ.ಶಿವಕುಮಾರ್ಗೆ ಎಚ್ಚರಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೀಲೇಶ್ಗೌಡ ಮಾತನಾಡಿ ಇಂತಹ ಮಹತ್ವದ ತೀರ್ಮಾನ ಕೈಗೊಳ್ಳುವ ಮುನ್ನಾ ಜಿಲ್ಲೆಯ ಪ್ರಮುಖರು ಹಾಗೂ ಸಂಘಟನೆಗಳ ಜೊತೆ ಚರ್ಚೆ ನಡೆಸಬೇಕಿತ್ತು, ಅದನ್ನು ಮಾಡದೆ ಡಿ.ಕೆ.ಶಿವಕುಮಾರ್, ಇಕ್ಬಾಲ್ ಹುಸೇನ್ ಅವರುಗಳ ಬೆಂಬಲಿಗರ ಹೆಸರಿನಲ್ಲಿರುವ ಭೂಮಿಯ ಆಸ್ತಿ ಬೆಲೆ ಹೆಚ್ಚಳಕ್ಕೆ ಅಷ್ಟೆ ಬೆಂಗಳೂರು ದಕ್ಣಿಣ ಜಿಲ್ಲೆ ಎಂದು ಹೆಸರು ಕೊಡುತ್ತಿದ್ದಾರೆ. ವೈಜ್ಞಾನಿಕವಾದ ಚಿಂತನೆಗೆ ಅನುಗುಣವಾಗಿಲ್ಲ. ಹೆಸರು ಬದಲಾವಣೆಯಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಕಿಡಿಕಾರಿದರು.ರೈತ ಮುಖಂಡ ಮಲ್ಲಯ್ಯ, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ಮುನಿರಾಜು, ಬಾಸ್ಕರ್, ನಾರಾಯಣ್, ನಾಗರಾಜು, ಪ್ರಶಾಂತ್, ಜಗದೀಶ್, ರಾಮೇಗೌಡ, ಶಿವುಗೌಡ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಇದ್ದರು.