ತಮ್ಮ ವಿಭಿನ್ನ ನಟನೆಯ ಮೂಲಕ ಕಡಿಮೆ ಪಾತ್ರ ಮಾಡಿದ್ದರೂ ತಮ್ಮ ವಿಷೇಶ ಛಾಪನ್ನು ಮೂಡಿಸಿರುವ ಬಾಲಾಜಿ ಮನೋಹರ್, ಈಗ ರಾಮರಸ ಚಿತ್ರದ ಮೂಲಕ ಮೂರು ಬೇರೆ ತರಹ ಪಾತ್ರಗಳಿಗೆ ಜೀವ ತುಂಬಿದ್ದಾರೆ ಅಂತ ರಾಮರಸ ಚಿತ್ರತಂಡ ಮತ್ತು ಅದರ ಕೆಲವು ದೃಶ್ಯಗಳ ನೋಡಿದವರು ಉಬ್ಬಿ ಮಾತಾಡುತ್ತಿದ್ದಾರೆ. ರಾಮರಸದ ಪಾತ್ರಗಳಲ್ಲಿ ಕ್ಷಾತ್ರ ತೇಜಸ್ಸಿನ ಗಹನತೆ, ಶಾಕ್ತಪರಂಪರೆಯ ಧೀಮಂತಿಕೆ ಹಾಗು ಅತೀಂದ್ರ ಶಕ್ತಿಗಳ ಅನಾವರಣ ಇದೆ.
ಇಂತಹದ್ದನ್ನ ನಿಭಾಯಿಸಲು ಕಡಿಮೆ ಸ್ಥರದ ನಟರಿಂದ ಸಾಧ್ಯನೇ ಇರಲಿಲ್ಲ. ಡಬ್ಬಿಂಗಲ್ಲಿ ಕ್ಲೈಮ್ಯಾಕ್ಸಿಗೆ ಬೇಕಾದ ಒಂದು ಬೇರೆ ತರಹದ ಧ್ವನಿಗೆ ನಿರ್ದೇಶಕರು ಸೌಂಡ್ ಇಂಜಿನಿಯರ್ ಜೊತೆ ತಿಂಗಳಿಂದ ಚರ್ಚಿಸುತ್ತಿದ್ದಾಗ, ಬಾಲಾಜಿಯವರು ಡಬ್ಬಿಂಗಲ್ಲಿ ತಮ್ಮ ಧ್ವನಿ ಬದಲಿಸಿಯೇ ಈ ಸಮಸ್ಯೆ ಬಗೆಹರಿಸಿದರು.ಕನ್ನಡದ ಈ ನಟ ಈ ಚಿತ್ರದ ಬಿಡುಗಡೆಯಾದ ನಂತರ ತೆಲಗು ತಮಿಳಿಗೆ ಹೊರಟು ಆಮೇಲೆ ನಮಗೆ ಸಿಗೋದಿಲ್ಲ ನೋಡ್ತಿರಿ ಅಂತ ನಿರ್ಮಾಪಕರು ಶರಾ ಬರೆದಂಗೆ ಹೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೋಷಕ ನಟನೊಬ್ಬನ ನಟನೆಯ ಬಗ್ಗೆ ಗಾಂಧಿನಗರ ಇಷ್ಟೊಂದು ಉತ್ಸಾಹ ತೋರಿಸುತ್ತಿರುವುದು ಶುಭಶಕುನವಾಗಿ ತೋರುತ್ತಿದೆ.